ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಡಾ.ಬಾಬು ಜಗಜೀವನರಾವ್ ಜಯಂತಿ ಉದ್ದೇಶಿಸಿ ಮಾಜಿ ಕೆಎಂಎಫ್ ನಿರ್ದೇಶಕ ಗುರು ಚಲವಾದಿ ಮಾತನಾಡಿದರು.
ನಮ್ಮ ಸಮಾಜ ಇಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಏಕೆಂದರೆ ನಮ್ಮ ನಾಯಕರು ಕೇವಲ ಹೋರಾಟ ಮಾಡುತ್ತಾ ಸಾಗಿದ್ದಾರೆ, ಹೋರಾಟ ಬೇಕು ಆದರೆ ಸಮಾಜದ ಪ್ರತಿಯೊಬ್ಬರು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತಿಮುಖ್ಯವಾಗಿರಬೇಕು ಎಂದು ಹೇಳಿದರು.
ತಹಶೀಲ್ದಾರ ಎಸ್.ಎಸ್. ನಾಯಕಲಮಠ ಮಾತನಾಡಿ ದಲಿತ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ, ದೇಶಕ್ಕೆ ನೀಡಿದ ಕೊಡುಗೆಯನ್ನು ನಾವು ಇಂದು ನೆನೆಯಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮನು ಪತ್ತಾರ ಮಾತನಾಡಿ, ನಮ್ಮ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತಲು ಈ ಎರಡು ಜ್ಯೋತಿಗಳು ಡಾ.ಬಾಬು ಜಗಜೀವನರಾವ್ ಮತ್ತು ಡಾ ಬಿ.ಆರ್. ಅಂಬೇಡ್ಕರ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದೀನ, ಶಿಕ್ಷಣ ಸಂಯೋಜಕ ವಿ.ಎಚ್. ಪುರೋಹಿತ, ತಾಲೂಕು ಡಿಎಸ್ಎಸ್ ಅಧ್ಯಕ್ಷ ದಶರಥ ಈಟಿ, ಅಮೀನಪ್ಪ ತೆಗ್ಗಿ, ವಿಠ್ಠಲ ದಿನ್ನಿ, ತಿಪ್ಪಣ್ಣ ಕುದುರಿ, ರಾಜು ಇವನಗಿ, ಶಾಂತಪ್ಪ ನಂದಿ, ಶೇಖು ಈಟಿ, ಸಂಗಪ್ಪ ಮಾದರ, ಬಾಬು ಬಿಂಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

