ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಎನ್‌ಟಿಪಿಸಿ ಕೂಡಗಿಯಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆ ಮೂಲಕ ಯೋಜನೆಯಿಂದ ಬಾಧಿತ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಯುವಕರಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.
ಎನ್ ಟಿಪಿಸಿ ಕೂಡಗಿಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸಹಯೋಗದಲ್ಲಿ ಈ ಯೋಜನೆ ಯಿಂದ ಬಾಧಿತ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಉಚಿತವಾಗಿ 500 ಹೊಲಿಗೆ ಯಂತ್ರಗಳನ್ನು ನೀಡಿ ಗೌರವಿಸಲಾಯಿತು.
ಯುವ ಸಬಲೀಕರಣ ಉದ್ದೇಶ ದಿಂದ ಸುಮಾರು 40 ಯುವಕರಿಗೆ “ಮೂಲ ಎಲೆಕ್ಟ್ರಿಷಿಯನ್ ತರಬೇತಿಗಾಗಿ ಕೌಶಲ್ಯ ನವೀಕರಣ ಕೋರ್ಸ್” ಅನ್ನು ಪೂರ್ಣಗೊಳಿಸಿದ 40 ಯುವಕರಿಗೆ ವಿದ್ಯುತ್ ಉಪಕರಣದ ಕಿಟ್‌ಗಳು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ, ಮಿಥಾಲಿ ಮಹಿಳಾ ಸಮಿತಿ ಅಧ್ಯಕ್ಷೆ ಅಂಜು ಝಾ, ಮಾನವ ಸಂಪನ್ಮೂಲ ಮುಖ್ಯಸ್ಥ ಎಸ್ ಮೂರ್ತಿ, ಪೂಜಾ ಪಾಂಡೆ, ಮಿಥಾಲಿ ಲೇಡೀಸ್ ಕ್ಲಬ್ ಸದಸ್ಯರು ಮತ್ತು ಇತರ ಎನ್‌ಟಿಪಿಸಿ ಅಧಿಕಾರಿಗಳು ಇದ್ದರು.

