ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಡಕೋಳ ಮಡಿವಾಳೇಶ್ವರ ಪುರಾಣದಲ್ಲಿ ಸುಮಂಗಲೆಯರಿಂದ ತೋಟ್ಟಿಲು ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಕಡಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ತೊಟ್ಟಿಲು ಹಾಕುವ ಕಾರ್ಯ ನೂರಾರು ಸುಮಂಗಲೆಯರು ಆರತಿ ಮಾಡಿ ದಿಗಂಬರೇಶ್ವರ ಮತ್ತು ಮಡಿವಾಳೇಶ್ವರ ತೊಟ್ಟಿಲು ಹಾಕಿ ಹೆಸರಿಟ್ಟು ಸಾಂಪ್ರದಾಯಿಕ ಹಾಡುಗಳನ್ನು ಹಾಡಿ ಕಾರ್ಯಕ್ರಮ ನಡೆಸಿ ಕೊಟ್ಟರು.
ಅಥರ್ಗಾದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ ಹೆಣ್ಣು ಮಕ್ಕಳು ಸಂಸಾರದಲ್ಲಿ ಗಂಡನಿಗೆ, ಅತ್ತೆ ಮಾವರನ್ನು ಮಕ್ಕಳಂತೆ ನೋಡಿಕೊಳ್ಳಿ ದೇವರು ಎಲ್ಲಿ ಇಲ್ಲಾ ಈ ನಿನ್ನ ಕುಟುಂಬದವರಲ್ಲಿ ಇದ್ದಾನೆ ಎಂದು ಹೇಳಿದರು.
ಸಾನಿಧ್ಯವನ್ನು ದಿಗಂಬರೇಶ್ವರ ಸಂಸ್ಥಾನ ಮಠದ ಶ್ರೀ ಕಲ್ಲಿನಾಥ ದೇವರು ವಹಿಸಿದ್ದರು.ಜೇರಟಗಿ ಶಿವಯ್ಯ ಸ್ವಾಮಿ, ಮೋರಟಗಿ ರಮೇಶ ವಿಭೂತಿ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ ಕೆ ಬಗಲಿ, ಮತ್ತು ಊರಿನ ಹಿರಿಯರು ಪಾಲ್ಗೊಂಡಿದ್ದರು.

