Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಮಸಮಾಜ ನಿರ್ಮಾಣದ ಕನಸು ಕಂಡ ಡಾ.ಬಾಬು ಜಗಜೀವನರಾಂ
(ರಾಜ್ಯ ) ಜಿಲ್ಲೆ

ಸಮಸಮಾಜ ನಿರ್ಮಾಣದ ಕನಸು ಕಂಡ ಡಾ.ಬಾಬು ಜಗಜೀವನರಾಂ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಡಾ.ಬಾಬು ಜಗಜೀವನರಾಂ ೧೧೮ನೇ ಜಯಂತಿ ಕಾರ್ಯಕ್ರಮ | ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ

ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರು ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ಕನಸು ಕಂಡು ಸಮಸಮಾಜ ನಿರ್ಮಾಣಕ್ಕೆ ಹಲವು ಕಷ್ಟ ನೊವುಗಳನ್ನು ಅನುಭವಿಸಿದ ಮಹಾನ ಚಿಂತಕರಾಗಿದ್ದರು ಎಂದು ಕರ್ನಾಟಕ ಬಾಲ ವಿಕಾಸ ಅಕ್ಯಾಡೆಮಿ ಅಧ್ಯಕ್ಷರಾದ ಸಂಗಮೇಶ ಅಪ್ಪಾಸಿ ಬಬಲೇಶ್ವರ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಬಂಜಾರ ವತ್ತದ ಹತ್ತಿರವಿರುವ ಡಾ. ಬಾಬು ಜಗಜೀವನ ರಾಮ ಭವನದಲ್ಲಿ ಹಮ್ಮಿಕೊಂಡ ಡಾ. ಬಾಬು ಜಗಜೀವನ ರಾಮ್ ಅವರ ೧೧೮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನ ರಾಂ ಶೋಷಿತ ವರ್ಗ, ಹಿಂದುಳಿದ ವರ್ಗಗಳ ಬದುಕು ಹಸನಾಗಿಸಿ, ಸಮ ಸಮಾಜವನ್ನು ನಿರ್ಮಿಸಲು ಕಂಡ ಕನಸನ್ನು ನನಸಾಗಿಸಲು, ನಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಅಂದಾಗ ಸಮಾಜಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಯದ ಅಹಲ್ಯಬಾಯಿ ಸ್ಬಾತ್ತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿತರಣಾ ಕೇಂದ್ರ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಪ್ರೋ. ಲಕ್ಷ್ಮೀದೇವಿ ವೈ. ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ, ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ಡಾ.ಬಾಬು ಜಗಜೀವನ ರಾಂ ಪುತ್ಥಳಿಗೆ ಮಾಲಾರ್ಪಣೆ

ನಗರದ ಸೆಟ್ ಲೈಟ್ ಬಸ್ ನಿಲ್ಧಾಣ ಹತ್ತಿರ ಇರುವ ಡಾ. ಬಾಬು ಜಗಜೀವನ ರಾಂ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾಪಂಚಾಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ, ಕ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

“ಡಾ. ಬಾಬು ಜಗಜೀವನ ರಾಂ ಅವರು ಜಾತಿ ವ್ಯವಸ್ಥೆಗಳಲ್ಲಿರುವ ನೋವು ನಲಿವುಗಳನ್ನು ಅರಿತು ಸಾಕಷ್ಟು ಸುಧಾರಣೆ ಮಾಡಿದರು. ಕ್ವಿಟ್ ಇಂಡಿಯಾಗಳಂತಹ ಚಳುವಳಿಗಳಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಹೋರಾಟಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಾಗಿದ್ದರು ಇವರ ಚಿಂತನೆಗಳನ್ನು ನಾವು ಎಂದಿಗೂ ಮರೆಯಬಾರದು.”

– ಲಕ್ಷಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ

“ಹಿಂದುಳಿದ ವರ್ಗಗಳ ಸಮಸ್ಯೆಗಳ,ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ.ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ನಾವೆಲ್ಲರೂ ಒಂದೇ ಎಂಬ ವಿಚಾರಗಳನ್ನು ಮಂಡಿಸುತ್ತಿದ್ದರು. ಡಾ.ಬಾಬು ಜಗಜೀವನ ರಾಂ ಅವರು ಉಪ ಪ್ರಧಾನಿಯಾಗಿದ್ದಾಗ ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡುವಂತೆ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿ ಕಾರಣೀಭೂತರಾದ ಮಹಾನ ವ್ಯಕ್ತಿಗಳಾಗಿ ಹೊರಹೊಮ್ಮಿದ ಮಹಾನ ಪುರುಷರಲ್ಲಿ ಒಬ್ಬರಾಗಿದ್ದರು. ಇವರ ಚಿಂತನೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.”

– ಟಿ.ಭೂಬಾಲನ್
ಜಿಲ್ಲಾಧಿಕಾರಿ, ವಿಜಯಪುರ

“ಡಾ.ಬಾಬು ಜಗಜೀವನ ರಾಂ ದೇಶದ ಒಬ್ಬ ಮಹಾನ ನಾಯಕ.ಮಹಾತ್ಮಾ ಗಾಂಧಿಜಿಯವರೊಂದಿಗೆ ಸ್ವಾತಂತ್ರದ ಹೋರಾಟದಲ್ಲಿ ಭಾಗವಹಿಸಿದ್ದರು. ದೇಶದ ಪ್ರಥಮ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದವರು ಕಾರ್ಮಿಕ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯನ್ನೇ ಮಾಡಿದ ಮಹಾನ್ ವ್ಯಕ್ತಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಎಲ್ಲರಲ್ಲಿಯೂ ಸಮಾನತೆ ಕಂಡವರು ಲಿಂಗ ತಾರತಮ್ಯ, ಜಾತಿ ಬೇದ ಬಿಟ್ಟು ಸಮಾನತೆಗೆ ಶ್ರಮಿಸಿದವರು ದೀನ, ದಲಿತ ಹಾಗೂ ಬಡವರಿಗಾಗಿ ಆರ್ಥಿಕವಾಗಿ ಬಹಳ ಬದಲಾವಣೆಯನ್ನು ತಂದರು ಅವರು ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು.”

– ರಿಷಿ ಆನಂದ
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ
    In (ರಾಜ್ಯ ) ಜಿಲ್ಲೆ
  • ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ
    In (ರಾಜ್ಯ ) ಜಿಲ್ಲೆ
  • ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ
    In (ರಾಜ್ಯ ) ಜಿಲ್ಲೆ
  • ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ
    In (ರಾಜ್ಯ ) ಜಿಲ್ಲೆ
  • ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ರಂಗದ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಜಾಯವಾಡಗಿ ಜಾತ್ರೆಯಲ್ಲಿ ಗಮನ ಸೆಳೆದ ಜಾನುವಾರುಗಳ ಜಾತ್ರೆ
    In (ರಾಜ್ಯ ) ಜಿಲ್ಲೆ
  • ರಂಜಾನ್: ಇಂಡಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ
    In (ರಾಜ್ಯ ) ಜಿಲ್ಲೆ
  • ಜಾನಪದ ಸಾಹಿತ್ಯ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಶ್ರೀಮಂತ ಸಾಹಿತ್ಯ
    In (ರಾಜ್ಯ ) ಜಿಲ್ಲೆ
  • ‘ಹುಲಿಮಿತ್ರ’ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ವಾಣಿಜ್ಯ ಬಳಕೆ ಎಲ್ಪಿಜಿ ಹಂಚಿಕೆ ಶೇ.50ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.