ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕು ಸರ್ಕಾರಿ ನೌಕರರ ಸಂಘವು ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಸಮಯದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗೌರವ ಧನ ನೀಡುವಂತೆ ಆಗ್ರಹಿಸಿ ತಹಸೀಲ್ದಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯ ಸಮಯದ್ಲಿ ಸ್ಥಾನಿಕ ಜಾಗೃತದಳ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹಾಯಕ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು,ಪೊಲೀಸ್, ಡಿ ದರ್ಜೆ ಸಹಾಯಕರು ಸೇರಿದಂತೆ ಇತರರಿಗೆ ಗೌರವ ಧನ ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಹ ಪರೀಕ್ಷೆ ಅವಧಿ ಮುಕ್ತಾಯವಾಗುವವರೆಗೂ ಪರೀಕ್ಷಾ ಕೇಂದ್ರದಲ್ಲಿ ಇರುತ್ತಾರೆ. ಇವರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸಿದ್ದಾರೆ. ಇವರಿಗೂ ಇತರೇ ಇಲಾಖೆಯವರಿಗೆ ನೀಡುವಂತೆ ಇವರಿಗೂ ಗೌರವಧನ ನೀಡುವಂತೆ ಆಗ್ರಹಿಸಿದರು. ಮನವಿಯನ್ನು ಶಿರಸ್ತೇದಾರ ಎ.ಎಚ್. ಬಳೂರಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಶೋಕ ಚನ್ನಪ್ಪ, ಸಂತೋಷ ಕುಂಟೋಜಿ, ಮನೋಜಕುಮಾರ ಪಾಟೀಲ, ಸಿದ್ದು ಉಕ್ಕಲಿ, ಎಸ್.ಡಿ.ದೊಡಮನಿ, ಆರ್.ಪಿ.ಮಠ, ಎ.ಟಿ.ಪಾಟೀಲ, ಎಸ್.ಎಂ.ಇಬ್ರಾಹಿಂಪುರ, ಶರಣಮ್ಮ ನಾಗರಾಳ, ಸುಧಾ ಪಟ್ನದ, ಎ.ಟಿ. ತೆನಹಳ್ಳಿ, ಅಮೃತಾ ಗೊಲಪ್ಪನವರ, ಕೆ.ಎಂ.ಯಡ್ರಾಮಿ, ಗುರುರಾಜ ಗಡಗಿ, ಪಿ.ಟಿ.ಲಮಾಣಿ, ಋಶಿಕೇಶ ಇಂಗಳೆ, ಶಂಕರ ತಳವಾರ, ವ್ಹಿ.ಜಿ.ನಿಂಬಾಳ, ಬಿ.ಜಿ.ದಾನಿ ಇತರರು ಇದ್ದರು.

