ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಒಂದು ಹನಿ ಪೋಲಿಯೋ ನಿಮ್ಮ ಮಗುವಿನ ಅರೋಗ್ಯ ಕಾಪಾಡುತ್ತದೆ ಮಕ್ಕಳ ಅರೋಗ್ಯ ರಕ್ಷಣೆಗಾಗಿ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಆರಿಫ್ ಮಾಗಿ ಮನವಿ ಮಾಡಿದರು.
ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದ ಪೋಲಿಯೋ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಪೋಲಿಯೋ ಮಲೇರಿಯಾ, ಕಾಲರಾ, ಕುಷ್ಟರೊಗ, ಆನೇಕಾಲು ರೋಗ, ಸೇರಿದಂತೆ ನಿಮ್ಮ ಅರೋಗ್ಯ ಕಾಪಾಡಲು ಸರಕಾರ ಹತ್ತು ಹಲವಾರು ಉಚಿತ ಯೋಜನೆಗಳು ನೀಡುತ್ತಿದೆ ತಾವೆಲ್ಲರೂ ಇದರ ಸದುಪಯೋಗ ಪಡೆದು ತಮ್ಮ ಅಕ್ಕಪಕ್ಕದ ಜನರಿಗೂ ಕೂಡಾ ತಿಳಿಸಬೇಕು ಮನುಷ್ಯ್ ಎಷ್ಟು ವರ್ಷ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ ಎಷ್ಟು ವರ್ಷ ಅರೋಗ್ಯದಿಂದ ಬದುಕುತ್ತಾನೆ ಎನ್ನುವುದು ಮುಖ್ಯ ಹೀಗಾಗಿ ಸಮುದಾಯ ಅರೋಗ್ಯ ಕೇಂದ್ರದ ಸಿಬ್ಬಂದಿಗೂ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮಸ್ಥರು ಸಹಕಾರ ನೀಡಿ ಉಚಿತ ಸೇವಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಲಸಿಕೆ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ, ಗಿರೀಶ್ ಪಾಟೀಲ್, ನೇತ್ರಾಧಿಕಾರಿ ಸ್ವೇತಾ ಕೋರಿ, ಚನ್ನಬಸು ದೇಗಿಲ್, ಮಾಶಾಳ, ಮುಜಾವರ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು.

