ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಶ್ರೀ ಬಸಪ್ಪ ಶರಣರ (ಮೌನ ಯೋಗಿ) ೨೮ನೇ ಆರಾಧನಾ ಮಹೋತ್ಸವ ಎ.೪ ಮತ್ತು ೫ ನಡೆಯಲಿದೆ.
ಎ೪ ರಂದು ತಾಲೂಕಿನ ಬಸರಕೋಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ರಾತ್ರಿ ಅಖಂಡ ಭಜನೆ ನಡೆಯಲಿದೆ. ಎ೫ ರಂದು ಬೆಳಿಗ್ಗೆ ೧೦.೩೦ಕ್ಕೆ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಶರಣರ ಗದ್ದುಗೆಗೆ ಅಭಿಷೇಕ, ಪೂಜೆ, ಭಜನಾ ಸಮಾಪ್ತಿ, ಮಹಾನೈವೇದ್ಯ, ಮಂಗಳಾರತಿ, ಹಾಗೂ ಮಧ್ಯಾಹ್ನ ೧ ಕ್ಕೆ ಮಹಾ ಪ್ರಸಾದ ಇರುತ್ತದೆ. ಈ ಕಾರ್ಯಕ್ರಮಗಳು ಚನ್ನಮ್ಮಲ್ಲಪ್ಪ ಶರಣರ ದಿವ್ಯ ನೇತೃತ್ವದಲ್ಲಿ ವಿವಿಧ ಮಠಾಧೀಶರ, ಸಂತರ ಸಮ್ಮುಖದಲ್ಲಿ ನಡೆಯಲಿದೆ. ಕಾರಣ ಸದ್ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ಗುರುದೇವರ ಕೃಪೆಗೆ ಪಾತ್ರರಾಗಬೇಕಾಗಿ ಪವಾಡ ಬಸವೇಶ್ವರ ಆಶ್ರಮದವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

