ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕೃಷ್ಣಾ ತೀರದ ಐತಿಹಾಸಿಕ ಸುಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆಯುಳ್ಳ ಪರಮಜಾಗೃತ ಸ್ಥಾನವು ಆದ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ತುಬಚಿ ಸುಕ್ಷೇತ್ರದಲ್ಲಿ ಶುಕ್ರವಾರ ಎಪ್ರಿಲ್ 4 ರಿಂದ ರವಿವಾರ ಏಪ್ರಿಲ್ 13ರವರೆಗೆ ಜಾತ್ರಾ ಮಹೋತ್ಸವದ ನಿಮಿತ್ಯ ವಿಶೇಷ ಕಾರ್ಯಕ್ರಮಗಳು ಶ್ರೀ ಮಠದ ಪೂಜ್ಯರಾದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ಜರುಗುವುದು .
ಕಾರ್ಯಕ್ರಮ ವಿವರ
ಏಪ್ರಿಲ್ 4ರಿಂದ ದಿನಾಲು ಸಂಜೆ 7 ಗಂಟೆಗೆ ಪ್ರವಚನ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಗುವುದು. ಏಪ್ರಿಲ್ 8ರಂದು ಮುಂಜಾನೆ 9 ಗಂಟೆಗೆ ಶ್ರೀ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು. ಏಪ್ರಿಲ್ 11ರಂದು ಪೂಜ್ಯಶ್ರೀ ಲಿಂ. ಶಿವಲಿಂಗೇಶ್ವರ ಮಹಾಸ್ವಾಮಿಗಳ 20ನೆಯ ಪುಣ್ಯ ಸ್ಮರಣೋತ್ಸವ ಹಾಗೂ ಭಜನಾ ಮೇಳ ಜರುಗುವುದು. ಏಪ್ರಿಲ್ 12ರಂದು ಮುಂಜಾನೆ 9 ಗಂಟೆಗೆ ಕರಡಿಮೇಳ ಉದ್ಘಾಟನಾ ಕಾರ್ಯಕ್ರಮ, ಏಪ್ರಿಲ್ 12ರಂದು ಸಂಜೆ 7 ಗಂಟೆಗೆ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ರಥೋತ್ಸವ ಜರಗುವುದು, ರಾತ್ರಿ 10.30 ಕ್ಕೆ ಸಾವಿರ ಹಳ್ಳಿಯ ಸರದಾರ ನಾಟಕ ಪ್ರದರ್ಶನ, ಏಪ್ರಿಲ್ 13 ರಂದು ಮುಂಜಾನೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಜರಗುವುದು ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

