ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸ್ವ- ಸಹಾಯ ಸಂಘಗಳು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಸಕಾಲದಲ್ಲಿ ಆರ್ಥಿಕ ಸಹಾಯ ಒದಗಿಸುವಲ್ಲಿ ತುಂಬಾ ಅನುಕೂಲಕರವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿಜಯಪುರ ಜಿಲ್ಲಾ ನಿರ್ದೇಶಕರು ಸಂತೋಷ್ ಕುಮಾರ್ ತಿಳಿಸಿದರು
ತಾಲೂಕಿನ ಕಾಶಿನಕುಂಟಿ ಗ್ರಾಮದಲ್ಲಿ ೨೮೫೧ನೇ ನೂತನ ಸ್ವ ಸಹಾಯ ಸಂಘ ಉದ್ಘಾಟನೆ ಮಾಡಿ ದಾಖಲಾತಿ ಹಸ್ತಾಂತರಿಸಿ ಅವರು ಮಾತನಾಡಿದರು.
ಸಮ್ಮ ಸಂಸ್ಥೆಯ ಯೋಜನೆ ಕಾರ್ಯಕ್ರಮಗಳಾದ ಅರೋಗ್ಯ ರಕ್ಷಾ, ಸಂಪೂರ್ಣ ರಕ್ಷಾ, ನಿರ್ಗತಿಕರಿಗೆ ಮಾಶಾಸನ ದೊರಕಿಸಿ ಕೊಡುವುದು, ದೇವಸ್ಥಾನಗಳಿಗೆ ಅನುದಾನ ವಿತರಣೆ, ಕೆರೆ ಕಾಮಗಾರಿ ಹೀಗೆ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರ ಜೊತೆಗೆ ಸ್ವ ಸಹಾಯ ಸಂಘಗಳನ್ನು ರಚಿಸಿ ಗ್ರಾಮೀಣ ಭಾಗದ ಜನತೆಯ ಜೀವನ ಸುಧಾರಿಸುವ ಕಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.
ತಾಲೂಕಿನ ಯೋಜನಾಧಿಕಾರಿ ನಾಗೇಶ ಎನ್.ಪಿ ಮಾತನಾಡಿ ಸಂಘ ಗಳನ್ನು ಸಮರ್ಪಕವಾಗಿ ನಡೆಸುವಲ್ಲಿ ಆಯಾ ಭಾಗದ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ಸಂಘದ ಎಲ್ಲ ಸದಸ್ಯರು ಸಂಘದ ಉಳಿತಾಯ ಮತ್ತು ವ್ಯವಹಾರಗಳ ವಿವರಗಳನ್ನು ತಪ್ಪದೇ ದಾಖಲಾತಿಯಲ್ಲಿ ನಮೂದಿಸಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಯಲ್ಲಾಲಿಂಗ ಬಿರಾದಾರ, ಯಮನಪ್ಪ ಕಾಮನಕೇರಿ, ರಮೇಶ್ ಬಿರಾದಾರ ಸೇವಾ ಪ್ರತಿನಿಧಿ ಸಂಗೀತಾ ದೇಸಾಯಿ ಮತ್ತು ನೂತನ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

