ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಗಣೇಶ ನಗರ ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ನಮ್ಮ ಕ್ಲಿನಿಕ್ ಅನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಕ್ಲಿನಿಕ್ಗಳು ನಗರ ಪ್ರದೇಶದ ಬಡವರ ಆರೋಗ್ಯ ಸಂಜೀವಿನಿಯಾಗಿದ್ದು. ರಾಜ್ಯದಲ್ಲಿ ಒಟ್ಟು 817 ನಮ್ಮ ಕ್ಲಿನಿಕ್ಗಳು ಅನುಮೋದನೆಯಾಗಿವೆ. ಮೊದಲನೇ ಹಂತದಲ್ಲಿ 2021-22 ರಲ್ಲಿ 438, ಎರಡನೇ ಹಂತದಲ್ಲಿ 2022-23 ರಲ್ಲಿ 125, ಮೂರನೇ ಹಂತದಲ್ಲಿ 2024-25 ರಲ್ಲಿ 254 ನಮ್ಮ ಕ್ಲಿನಿಕ್ಗಳು ಅನುಮೋದನೆಯಾಗಿವೆ. ಮತಕ್ಷೇತ್ರದಲ್ಲಿ ಈಗಾಗಲೇ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿಯಲ್ಲಿ ಮೊದಲ ಹಂತದಲ್ಲಿ ನಮ್ಮ ಕ್ಲಿನಿಕ್ಗಳು ಆರಂಭವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಬಸವನಬಾಗಾವಾಡಿ, ಮನಗೂಳಿಯಲ್ಲಿ ಒಂದೊಂದು ನಮ್ಮ ಕ್ಲಿನಿಕ್ಗಳು ಆರಂಭಿಸಲಾಗುತ್ತಿದೆ. ಪಟ್ಟಣ ಪ್ರದೇಶದ ಜನರಿಗೆ ನಮ್ಮ ಕ್ಲಿನಿಕ್ ನಿಂದ ಉತ್ತಮ ಆರೋಗ್ಯ ಸೌಲಭ್ಯ ದೊರೆಯಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಹಕಾರ ಮಹಾಮಂಡಳ ನಿರ್ದೇಶಕ ಐ. ಸಿ. ಪಟ್ಟಣಶೆಟ್ಟಿ, ಪುರಸಭೆ ನೂತನ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಸಂಗಮೇಶ ಓಲೇಕಾರ, ರವಿ ರಾಠೋಡ, ಪುರಸಭೆ ಸದಸ್ಯ ರೇಖಾ ಬೆಕಿನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುನಾರಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳು ಡಾ. ಕೇಸರಸಿಂಗ ಗುಂಡಬಾವಡಿ, ತಾಲೂಕ ಆರೋಗ್ಯ ಅಧಿಕಾರಿ ಡಾ. ಕವಿತಾ ದೊಡ್ಡಮನಿ,ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಪ್ರೀತಿ ಇಂಗಳೇಶ್ವರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಲತಾ ಬಿರಾದಾರ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಮೇಟಿ, ತಾಲೂಕ ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿ ರಾಜಶೇಖರ ಚಿಂಚೋಳಿ
ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.

