ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯೆಯ ಅಂಗವಾಗಿ ಸ್ನಾನಕ್ಕಿಳಿದ ಮೂವರಲ್ಲಿ ನಾಪತ್ತೆಯಾಗಿದ್ದ ಇಬ್ಬರ ಶವಗಳು ಮಂಗಳವಾರ ದೊರಕಿವೆ.
ಆಲಮಟ್ಟಿ ಶಾಸ್ತ್ರಿ ಜಲಾಶಯದ ಮುಂಭಾಗದ ಕೃಷ್ಣಾ ನದಿಯಲ್ಲಿ ಭಾನುವಾರ ಈಜಾಡಲು ಹೋಗಿದ್ದ
ಮೂವರಲ್ಲಿ ಒಬ್ಬನ ಶವ ಪತ್ತೆಯಾಗಿದ್ದು, ನಾಪತ್ತೆಯಾದ ಇನ್ನಿಬ್ಬರಿಗಾಗಿ ಎರಡು ದಿನಗಳ ಕಾಲ ಹುಡುಕಾಟ ನಡೆದಿತ್ತು. ಮೂವರು ಬಾಗಲಕೋಟೆ ತಾಲ್ಲೂಕಿನ ಇಲ್ಯಾಳ ಗ್ರಾಮದವರು.
ಭಾನುವಾರವೇ ಸೋಮಶೇಖರ ಬೊಮ್ಮಣ್ಣ ದೇವರಮನಿ (೧೫) ಶವ ಪತ್ತೆಯಾಗಿದ್ದು. ಇವನೊಂದಿಗೆ ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮಲ್ಲಪ್ಪ ಬಸಪ್ಪ ಬಗಲಿ (೧೫), ಪರನಗೌಡ ಮಲ್ಲಪ್ಪ ಬೀಳಗಿ (೧೭) ಕಾಣೆಯಾಗಿದ್ದರು, ಅವರಿಗಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆದಿದೆ.
ಘಟನೆ ನಡೆದ ತಕ್ಷಣ ಕಾಣೆಯಾದವರ ಹುಡುಕಾಟಕ್ಕೆ ಮೀನುಗಾರರು, ಅಗ್ನಿಶಾಮಕದಳದವರು ಅವಿರತವಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಿ ಕೊನೆಗೂ ಮಂಗಳವಾರ ಶವ ದೊರಕಿತು.
ಪ್ರಕರಣ ಬಾಗಲಕೋಟ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ
