ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೧೦/೧೧ ಕೆ.ವ್ಹಿ ಉಮರಾಜ (ರೇವತಗಾಂವ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸದಾಗಿ ೨x೧೦ ಎಮ್.ವಿ ಸಾಮರ್ಥ್ಯದ ಪರಿವರ್ತಕಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ೧೧೦/೧೧ ಕೆ.ವ್ಹಿ ಕೆರೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ೧೧ ಕೆ.ವ್ಹಿ ಟಾಕಳಿ ಐಪಿ, ೧೧ ಕೆ.ವ್ಹಿ ಕಲ್ಮಡ ಐಪಿ ಹಾಗೂ ೧೧ ಕೆ.ವ್ಹಿ ಕೆರೂರು ಎನ್.ಜೆ.ವೈ ನೀರು ಸರಬರಾಜು ವಿದ್ಯುತ್ ಮಾರ್ಗಗಳಲ್ಲಿ ಏಪ್ರಿಲ್ ೨ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ಗಂಟೆ ವರೆಗೆ ಹಾಗೂ ೧೧೦/೧೧ ಕೆ.ವ್ಹಿ ಕೆರೂರು ವಿದ್ಯುತ ವಿತರಣಾ ಕೇಂದ್ರದಿಂದ ಹೊರಹೋಗುವ ೧೧ ಕೆ.ವ್ಹಿ ಅಂಕಲಮ್ಮ ಐಪಿ, ೧೧ ಕೆ.ವ್ಹಿ ಕಲ್ಮಡ ಐಪಿ ವಿದ್ಯುತ್ ಮಾರ್ಗಗಳಲ್ಲಿ ಏಪ್ರಿಲ್ ೩ರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಅದರಂತೆ, ೧೧೦/೧೧ ಕೆ.ವ್ಹಿ ಕೆರೂರು ವಿದ್ಯುತ ವಿತರಣಾ ಕೇಂದ್ರದಿಂದ ಹೊರಹೋಗುವ ೧೧ ಕೆ.ವ್ಹಿ ಅಂಕಲಮ್ಮ ಐಪಿ ವಿದ್ಯುತ್ ಮಾರ್ಗಗಳಲ್ಲಿ ಏಪ್ರಿಲ್ ೪ರ ಮಧ್ಯಾಹ್ನ ೨ ರಿಂದ ಸಂಜೆ ೬ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೊರಿದ್ದಾರೆ.
