ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಜಾಮೀಯಾ ಮಸೀದಿ ಮುಂಭಾಗ ಮುಸ್ಲಿಂ ಬಾಂಧವರು ಶುಕ್ರವಾರದ ಪ್ರಾರ್ಥನೆ ಮುಗಿಸಿಕೊಂಡು ಹೊರಬಂದ ನಂತರ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಶುಕ್ರವಾರ ವಕ್ಫ್ (ತಿದ್ದುಪಡಿ) ಮಸೂದೆ-೨೦೨೪ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವಂತೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಜಮಾತೇ ಇಸ್ಲಾಮೀ ಹಿಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೊಹಮ್ಮದಯುಸುಫ್ ಕಣಿ ಮಾತನಾಡಿ, ಕೇಂದ್ರ ಸರ್ಕಾರವು ಮಂಡಿಸುವ ವಕ್ಫ್ (ತಿದ್ದುಪಡಿ) ಮಸೂದೆ-೨೦೨೪ ಕಾಯ್ದೆಯು ವಕ್ ಆಸ್ತಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ವಿರೋಧವಾಗಿದೆ. ಈ ಕಾಯ್ದೆಯು ಯಾವುದೇ ಕಾರಣಕ್ಕೂ ಮಂಡನೆಯಾಗದೆ ಜಾರಿ ಬರಬಾರದು. ಇದನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು. ಈ ಕಾಯ್ದೆ ವಿರೋಧಿಸಿ ಇಂದು ರಾಷ್ಟ್ರವ್ಯಾಪಿಯಲ್ಲಿ ನಮ್ಮ ಬಾಂಧವರು ರಂಜಾನ ಹಬ್ಬದ ಕೊನೆಯ ಶುಕ್ರವಾರದ ಪ್ರಾರ್ಥನೆ ನಂತರ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಅಧ್ಯಕ್ಷ ಶಬ್ಬೀರಅಹ್ಮದ ನದಾಫ, ಮುಖಂಡರಾದ ಸಲೀಂ ಸೈಯದ, ಕಮಲಸಾಬ ಕೊರಬು, ಅಬ್ದುಲರಜಾಕ ಗಬ್ಬೂರ, ಅಫೀಜ್ ರೆಹಮಾನ, ಶಫೀಕ ಹೊಕ್ರಾಣಿ, ಅಬ್ದುಲರಜಾಕ ಬಾಗವಾನ, ಚಾಂದಬಾಷಾ ಕೊರಬು, ಅಬ್ದುಲರಶೀದ ಅವಟಿ, ಅಲ್ಲಾಭಕ್ಷ ಕೊರಬು, ರಫೀಕ ಸಾಠಿ, ಅಬ್ದುಲಖಾದರ ಮುದ್ದೇಬಿಹಾಳ, ಖಾಜಂಬರ ನದಾಫ, ಹಸನಸಾಬ ಅವಟಿ, ಐ.ಎಚ್.ಬಾಗವಾನ, ಮಹ್ಮದರಫೀಕ ಹೊಕ್ರಾಣಿ, ಮೌಲಾನಹಾಫೀಜ್ ರೆಹಮಾನ, ಜಾಕೀರ ನದಾಫ, ಇಬ್ರಾಹಿಂಸಾಬ ಟಾಂಗೆವಾಲೆ, ವಸೀಂ ಮಕಾನಾದರ, ಇರ್ಪಾನ್ ಮಕಾನದಾರ, ಶಫೀಕ ಹೊಕ್ರಾಣಿ, ಅಜೀಜ ಬಾಗವಾನ ಸೇರಿದಂತೆ ಇತರರು ಇದ್ದರು.

