ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾಜಿ ಕೇಂದ್ರ ಸಚಿವ,ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯನ್ನು ಹೈಕಮಾಂಡ್ ಮರು ಪರಿಶೀಲನೆ ಮಾಡಿ, ರದ್ದು ಮಾಡಬೇಕೆಂದು ಜ್ಞಾನ ಭಾರತಿ ವಿದ್ಯಾ ಮಂದಿರದ ಕಾರ್ಯದರ್ಶಿ ಸತೀಶ ಹಿರೇಮಠ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕರ್ನಾಟಕದ ಅಭಿವೃದ್ದಿ ಚಿಂತಕ, ಶಿಕ್ಷಣ ಪ್ರೇಮಿ, ಭ್ರಷ್ಟಾಚಾರ ಮತ್ತು ವಂಶವಾರು ರಾಜಕಾರಣವನ್ನು ವಿರೋಧಿಸಿ ಸರ್ವ ಸಮಾಜದ ಹಿತ ಬಯಸಿದ ಹಿರಿಯ ರಾಜಕಾರಣಿ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾದ ಯತ್ನಾಳರ ಉಚ್ಚಾಟನೆ ಖಂಡನೀಯ. ಪಕ್ಷದ ವರಿಷ್ಠರು ಕೂಡಲೇ ಇದನ್ನು ಪರಿಶೀಲಿಸಿ ರದ್ದುಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

