ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ವಿದ್ಯಾರ್ಥಿನಿಯರ ಸಾಧನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಳೆದ ೨೦೨೩-೨೪ ನೇ ಸಾಲಿನ ನವೆಂಬರ್ ತಿಂಗಳಲ್ಲಿ ಜರುಗಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯಕ್ಕೆ ಪ್ರಥಮ ಮತ್ತು ದ್ವಿತೀಯ ರ್ಯಾಂಕ ಪಡೆಯುವುದರ ಮೂಲಕ ಉನ್ನತ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿನಿಯರಾದ ಕು.ಅನುಷಾ ಕುಲಕರ್ಣಿ ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್ ) ನಲ್ಲಿ ಶೇ ೮೧.೨೫% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದಾಳೆ, ಅಲ್ಲದೆ ಕು.ಐಶ್ವರ್ಯ ಆಸಂಗಿ ಎಂಎಸ್ಸಿ (ರಸಾಯನಶಾಸ್ತ್ರ) ವಿಭಾಗದಲ್ಲಿ ಶೇ ೮೧.೩೩% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಅದೇ ರೀತಿಯಾಗಿ ಎಂ ಎ (ಇಂಗ್ಲಿಷ್) ವಿಭಾಗದಲ್ಲಿ ಕು. ಮೇಘಾ ಪವಾರ್ ಶೇ ೭೦.೩೮% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದುಕೊಂಡು ಉನ್ನತ ಸಾಧನೆ ತೋರಿದ್ದಾರೆ. ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸಚಿವರು ಡಾ.ಎಂ.ಬಿ ಪಾಟೀಲ, ಆಡಳಿತಾಧಿಕಾರಿಗಳು ಡಾ.ವಿ.ಎಸ್.ಬಗಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್ ಎಂ.ಮಿರ್ದೆ, ಉಪ ಪ್ರಾಚಾರ್ಯ ಡಾ.ಅನೀಲ್ ಬಿ ನಾಯಕ ಮತ್ತು ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

