ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರು ಶೈಕ್ಷಣಿಕ, ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವರ್ಷದ ಕರ್ನಾಟಕ ರತ್ನ ಪುನಿತ್ ರಾಜಕುಮಾರ ಸ್ಪೂರ್ತಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ಸಮಾರಂಭವು ಕರ್ನಾಟಕ ಸೋಶಿಯಲ್ ಕ್ಲಬ್ ಧಾರವಾಡ ಹಾಗೂ ವಿಶ್ವಾಸ ಫೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ದಂದು ರಂಗಾಯಣ ಸಭಾ ಭವನ ಧಾರವಾಡದಲ್ಲಿ ಜರುಗಲಿದೆ.
ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ, ಆಡಳಿತ ಮಂಡಳಿಯ ಸದಸ್ಯರು,ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ,ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ,ಸೀತಾ ಆರೇಶಂಕರ,ಸರುಬಾಯಿ ಗಡದೆ,ಸುನಿತಾ ಗುಂಡದ,ವೀಣಾ ಗುಡಿಮಠ ಮುಂತಾದವರು ಹರ್ಷ ವ್ಯಕ್ತ ಪಡಿಸಿದ್ದಾರೆ