ಬಸವನಬಾಗೇವಾಡಿ: ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಮನಗೌಡ ಪಾಟೀಲ (ಮನಗೂಳಿ) ಅವರು ಸೋಮವಾರ ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ನಡೆಸಿ ಮತಯಾಚಿಸಿದರು.
ಪಟ್ಟಣದ ಎಪಿಎಂಸಿ ಮುಂಭಾಗದ ಪಕ್ಷದ ಪ್ರಚಾರ ಕಚೇರಿ ಮುಂಭಾಗದಿಂದ ಆರಂಭವಾದ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ನಂತರ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಎಸ್.ಪಾಟೀಲ, ಮುಖಂಡರಾದ ಅಪ್ಸರಾಬೇಗಂ ಚಪ್ಪರಬಂದ್, ಬಿ.ಕೆ.ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ಎಸ್.ಎ.ಯರನಾಳ, ಉಮೇಶ ಹಾರಿವಾಳ, ಬಸವರಾಜ ಅವಟಿ, ಮಲ್ಲಿಕಾರ್ಜುನ ಅವಟಿ, ನಾಗೇಶ ಪಡಶೆಟ್ಟಿ, ಗುರುನಗೌಡ ಪಾಟೀಲ ಇದ್ದರು.