ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿಂದಗಿ ಗ್ರಾಮ ಪಂಚಾಯಿತಿ ಬೆಕಿನಾಳ ಜಲಪುರ್ ಕೆರೆ ಸಮಿತಿ ಇವರ ಸಹಭಾಗಿತ್ವದಲ್ಲಿ ಜಲಪುರ ಕೆರೆಯನ್ನ ಧರ್ಮಸ್ಥಳ ಕ್ಷೇತ್ರದ 11,40,000 ರೂ ಗಳಲ್ಲಿ ಅಭಿವೃದ್ಧಿ ಪಡಿಸಿದ್ದು ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದಎಸ್ ಎಸ್ ಪಾಟೀಲ್ ಅಸ್ಕಿ ಇವರು ನಾಮಫಲಕ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ಟೋಪಯ್ಯ ಮುತ್ಯ ಮಾಲಿಂಗೇಶ್ವರ ಮಠ ಜಲಪುರ ಇವರ ದಿವ್ಯ ಸಾನಿಧ್ಯದಲ್ಲಿ ದೀಪ ಬೆಳಗಿಸಿ ವೇದಿಕೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರು ಸಂತೋಷ್ ಕುಮಾರ್ ಸರ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ 43 ವರ್ಷದಿಂದ ಕರ್ನಾಟಕ ರಾಜ್ಯದ್ಯಂತ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡಿ ಕೆರೆ ಹಸ್ತಾಂತರದ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷ ಸಿದ್ದನಗೌಡ ಬಿರಾದಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸುಧಾಕರ್ ಯೋಜನಾಧಿಕಾರಿ ಕೃಷ್ಣಮೂರ್ತಿ ಸರ್ ಕೆರೆ ಇಂಜಿನಿಯರ್ ನಿಂಗರೆಡ್ಡಿ ಸಮಿತಿಯ ಸದಸ್ಯರು ಗ್ರಾಮಸ್ಥರು ಸಂಘದ ಸದಸ್ಯರು ಕೃಷಿ ವಲಯ ಮೇಲ್ವಿಚಾರಕ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.

