ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಕಿಮ್ ಚಂದ್ರ ಚಟರ್ಜಿಯವರ ರಚನೆಯ “ವಂದೇ ಮಾತರಂ” ಗೀತೆಗೆ ೧೫೦ ವಸಂತಗಳು ತುಂಬಿದ ಹಿನ್ನಲೆಯಲ್ಲಿ “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ) ವಿಜಯಪುರ ಜಿಲ್ಲಾ ಸಮಿತಿಯು ನಗರದ ಚೇತನಾ ಮಹಾವಿದ್ಯಾಲಯದಲ್ಲಿ ಶನಿವಾರ ನ.೨೧ ಸಂಜೆ ೫.೩೦ ಗಂಟೆಗೆ “ವಂದೇ ಮಾತರಂ ಗೀತಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಖ್ಯಾತ ವಾಗ್ಮಿ ಅಶೋಕ ಹಂಚಲಿ ಅವರು ವಂದೇ ಮಾತರಂ ಕುರಿತು ಉಪನ್ಯಾಸ ಮಾಡಲಿದ್ದಾರೆ ಹಾಗೂ ವೈದ್ಯರು , ಸಮಾಜ ಸೇವಕರಾದ ಡಾ.ಅಜೇಯ ಕುಲಕರ್ಣಿ ಅವರು ವಂದೇ ಮಾತರಂ ಗೀತೆಯನ್ನು ಗಾಯನ ಮಾಡಿಲಿದ್ದಾರೆಂದು ಎಂದು “ಅಭಾಸಾಪ ವಿಜಯಪುರದ ಜಿಲ್ಲಾಧ್ಯಕ್ಷರಾದ ವಿವೇಕ ಕುಲಕರ್ಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೮೮೦೦೫೦೮೧೮ ವಿವೇಕ ಕುಲಕರ್ಣಿ , ಸುಕಾಂತ ೮೧೦೫೪೭೩೨೭೫ , ಅನಿಲ ಬಳುಂಡಗಿ ೯೫೩೫೭೯೨೨೯೫ , ಸಂಪರ್ಕಿಸಲು ಕೋರಲಾಗಿದೆ.

