ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಜಿಲ್ಲಾ ಮಕ್ಕಳ ದಿನಾಚರಣೆ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು.
ಸಸಿಗೆ ನಿರುಣಿಸುವ ಮೂಲಕ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪಗೌಡ ಬಿರಾದಾರ ಉದ್ಘಾಟಿಸಿದರು.
ಪತ್ರಕರ್ತ ಶಾಂತು ಹಿರೇಮಠ ಉಪನ್ಯಾಸ ನೀಡಿದರು.
ಚಿಂತನ ಗೋಷ್ಠಿಗೆ ಆಯ್ಜೆ ಆದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಮೃದ್ಧಿ ಗಣಾಚಾರಿ ಶಿಸ್ತು ಹಾಗೂ ಸಂಸ್ಕಾರ ವಿದ್ಯಾರ್ಥಿ ಜೀವನದ ಆಭರಣ ಕುರಿತು ಮಾತನಾಡಿದರು.
ಆರ್.ಎಮ್.ಎಸ್.ಪ್ರೌಢಶಾಲೆ ಆಲಮೇಲ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ರಮೇಶ ಕಟ್ಟಿಮನಿ ತಂತ್ರಜ್ಞಾನ ಬಳಕೆ ಕುರಿತು ಮಾತನಾಡಿದರು
ಈ ವೇಳೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಪುತ್ರ ಕಿರನಳ್ಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಎಸ್.ಎಸ್.ಸಾತಿಹಾಳ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರ ಗೀತಾ ಎಸ್ ಹಾಗೂ ಆಲಮೇಲ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಬ್ದುಲಘನಿ ದೇವರಮನಿ ರವರಿಗೆ ಸನ್ಮಾನಿಸಲಾಯಿತು
ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾಧ್ಯಕ್ಷ ಪ್ರೊ.ಎ.ಆರ್.ಹೆಗ್ಗನದೊಡ್ಡಿ, ಪ್ರ.ಕಾರ್ಯದರ್ಶಿ ಎಸ್.ಎಸ್.ಸಾತಿಹಾಳ, ಉಪಾಧ್ಯಕ್ಷ ಶಿವಕುಮಾರ ಶಿವಶಿಂಪಿಗೇರ, ಆಲಮೇಲ ತಾಲೂಕು ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ಮಹಿಳಾ ಪ್ರತಿನಿಧಿ ಗೀತಾ ಎಸ್, ಮಾಧ್ಯಮ ಪ್ರತಿನಿಧಿ ಅಬ್ದುಲಘನಿ ದೇವರಮನಿ, ಬ.ಬಾಗೇವಾಡಿ ತಾಲೂಕು ಅಧ್ಯಕ್ಷ ಬಸಮ್ಮ ಹಂಜಗಿ ಇದ್ದರು.
ರಾಜ್ಯ ಮಟ್ಟದ ಅಣುಕು ಸಂಸತ್ ಪಟುಗೆ ಆಯ್ಕೆಯಾದ ಕು.ಅಪೂರ್ವ ಕುದರಗೊಂಡ ಉದ್ಘಾಟಿಸಿದರು.
ಈ ವೇಳೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

