ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶನೇಶ್ವರ ದೇವಸ್ಥಾನದ ಆವರಣದಲ್ಲಿ ನ.21ರಂದು ಬೆಳಗ್ಗೆ 7 ಗಂಟೆಗೆ ನಾಗದೇವತೆಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಅರ್ಚಕ ನಾಗಪ್ಪ ಮಕ್ತೇದಾರ ಮನವಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಪರಂಪರೆ ಹಾಗೂ ಶಾಸ್ತ್ರೋಕ್ತ ವಿಧಿ-ವಿಧಾನಗಳನ್ವಯ ನಾಗದೇವತೆಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಸಂತೆ ಕೆಲ್ಲೂರಿನಿಂದ ನಾಗದೇವತೆಯ ಮೂರ್ತಿಯನ್ನು ತರಲಾಗಿದ್ದು, ಪುಣ್ಯಕ್ಷೇತ್ರ ಕುಕ್ಕೆಯಿಂದ ಪವಿತ್ರ ಮೃತ್ತಿಕೆ, ಮುತ್ತು ಹಾಗೂ ಹವಳಗಳನ್ನು ತಂದು ಸಕಲ ವಿಧಿ-ವಿಧಾನಗಳೊಂದಿಗೆ ಮೂರ್ತಿಗೆ ಜೀವ ತುಂಬುವ ಕೈಂಕರ್ಯ ನಡೆಸಲಾಗಿದೆ ಎಂದು ವಿವರಿಸಿದರು.
ಮೂರ್ತಿಯ ಸೇವೆಯನ್ನು ಮುರಿಗೆಪ್ಪ ಮೋಟಗಿ ಮಾಡಿದ್ದು, ಶಂಕರ ಭಟ್ಟರ ನೇತೃತ್ವದಲ್ಲಿ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಪ್ರಮುಖರಾದ ಸತೀಶ ಓಸ್ವಾಲ್, ಬಸವರಾಜ ಮೋಟಗಿ, ಅಶೋಕ ಚಟ್ಟೇರ, ಸಿದ್ದಲಿಂಗಯ್ಯ ಕಲ್ಯಾಣಮಠ, ಮಾಣಿಕಚಂದ ದಂಡಾವತಿ, ಅಪ್ಪು ದೇಗಿನಾಳ, ಮತ್ತೀತರ ಗಣ್ಯರ ಉಸ್ತುವಾರಿಯಲ್ಲಿ ಎಲ್ಲಾ ಪೂಜಾ ವಿಧಿ-ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ. ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕು ಎಂದು ಕೋರಿದ್ದಾರೆ.
