ಬಸವನಬಾಗೇವಾಡಿ: ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮತಕ್ಷೇತ್ರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಕೊಲ್ಹಾರ ಪಟ್ಟಣದಿಂದ ಆರಂಭವಾದ ರ್ಯಾಲಿಯು ಬಳೂತಿ, ಹಣಮಾಪುರ, ಅರಸಣಗಿ, ಗಣಿ, ಆಲಮಟ್ಟಿ, ನಿಡಗುಂದಿ, ಗೊಳಸಂಗಿ, ಮುತ್ತಗಿ ಮಾರ್ಗವಾಗಿ ಬಸವನಬಾಗೇವಾಡಿ ತಲುಪಿತು ನಂತರ ಯರನಾಳ ಮಾರ್ಗವಾಗಿ ಮನಗೂಳಿ ಪಟ್ಟಣದ ವರೆಗೆ ರ್ಯಾಲಿ ನಡೆಯಿತು.
ರ್ಯಾಲಿಯಲ್ಲಿ ಶಾಸಕ ಶಿವಾನಂದ ಪಾಟೀಲ, ಅವರ ಪುತ್ರರಾದ ಸತ್ಯಜೀತ, ಶ್ರೇಯಸ್, ಪುತ್ರಿಯರಾದ ಸಂಯುಕ್ತ, ಸಂಪ್ರದಾ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮುಖಂಡ ಭರತ ಅಗರವಾಲ ಅಪಾರ ಬೆಂಬಲಿಗರೊಂದಿಗೆ ತೆರದ ವಾಹನದಲ್ಲಿ ಜನರತ್ತ ಕೈ ಮುಗಿದು ಮತ ಯಾಚಿಸಿದರು.
ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಸಿಳ್ಳೆ, ಕೇಕೆ ಹಾಕುವ ಮೂಲಕ ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡರು.