ಬಸವನಬಾಗೇವಾಡಿ: ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪರ ಚುನಾವಣೆ ಪ್ರಚಾರಾರ್ಥವಾಗಿ ಭಾನುವಾರ ಸಂಜೆ ಗ್ರಾಮದಲ್ಲಿ ಬೈಕ್ ರ್ಯಾಲಿ, ಡೊಳ್ಳು ಕುಣಿತದೊಂದಿಗೆ ತೆರದ ವಾಹನದಲ್ಲಿ ಮೆರವಣಿಗೆ, ಬೃಹತ್ ರ್ಯಾಲಿ ಸೇರಿದಂತೆ ಪ್ರಚಾರ ಸಭೆ ಜರುಗಿತು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರು ಶಾಸಕ, ಸಚಿವರಾಗಿದ್ದ ಸಂದರ್ಭದಲ್ಲಿ ಮತಕ್ಷೇತ್ರದಲ್ಲಿ ಕೋರ್ತಿ-ಕೊಲ್ಹಾರ ಬ್ರೀಜ್, ನೀರಾವರಿ, ಕುಡಿಯುವ ನೀರು, ಬಹುಹಳ್ಳಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅವರಿಗೆ ಜನರ ಆಶೀರ್ವಾದವಿದೆ, ಕಾಂಗ್ರೆಸ್ ಪ್ರಣಾಳಿಕೆ ನೀವು ನೋಡಿದ್ದೀರಿ, ಆ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಎಂದು ಹೇಳಿದ್ದಾರೆ. ಮತ್ತೆ ತಗೆಯಲು ಹೊರಟಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ಪರಮಾನಂದ ತನಿಖೆದಾರ ಮಾತನಾಡಿದರು. ಭೀರಪ್ಪ ಸಾಸನೂರ, ನಿಂಗನಗೌಡ ಪಾಟೀಲ, ಪರಮನಗೌಡ ಬಿರಾದಾರ, ಅಪ್ಪುಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪ್ರವೀಣ ಕಾಮಗೊಂಡ, ಸುರೇಶ ಇಟ್ಟಂಗಿಹಾಳ, , ಟಿ.ಸಿ.ಯಳಮೇಲಿ, ಚನ್ನುಗೌಡ ಬಿರಾದಾರ, ಕಲ್ಲಪ್ಪಗೌಡ ಬಿರಾದಾರ, ರಾಜುಗೌಡ ಪಾಟೀಲ, ಸಂತುಗೌಡ ಪಾಟೀಲ, ರಮೇಶ ದೊಡಮನಿ, ಸಿ.ಎಂ.ಗಣಕುಮಾರ, ರೇವಣಸಿದ್ಧ ಮಣ್ಣೂರ, ಹಣಮಂತ ಬೆಳ್ಳುಬ್ಬಿ ಇದ್ದರು.