ದೇವರಹಿಪ್ಪರಗಿ: ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಗೆಲುವಿಗಾಗಿ ಅಭಿಮಾನಿಗಳು ಇಂಗಳಗಿ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದಿಂದ ರಾವುತರಾಯ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದರು.
ಪಟ್ಟಣದಿಂದ ೪ ಕಿ.ಮೀ ದೂರದ ಇಂಗಳಗಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಹಾಗೂ ರಾಜುಗೌಡ ಪಾಟೀಲ ಅಭಿಮಾನಿಗಳಾದ ಮುತ್ತು ನಾದ, ರವಿ ಬಿರಾದಾರ, ಸಿದ್ದನಗೌಡ ಪೋಲೇಶಿ ಹಾಗೂ ಕಲ್ಮೇಶ ಇಂಡಿ ಅನ್ನುವವರು ತಮ್ಮ ಗ್ರಾಮದ ದೇವಸ್ಥಾನದಿಂದ ಪಟ್ಟಣದ ರಾವುತರಾಯ ದೇವಸ್ಥಾನದವರೆಗೆ ದಿಡನಮಸ್ಕಾರದ ಮೂಲಕ ತಮ್ಮ ಅಭಿಮಾನ ಮೆರೆದರು.
ಈ ಸಂದರ್ಭದಲ್ಲಿ ಕಾಸುಗೌಡ ಜಲಕತ್ತಿ, ಗುರುರಾಜ್ ಆಕಳವಾಡಿ, ಸಂಗನಗೌಡ ಬಿರಾದಾರ (ಮುಳಸಾವಳಗಿ), ರಿಯಾಜ್ ನಾಯ್ಕೋಡಿ, ಸುಭಾಸ ಜಾಧವ, ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ, ಬಂಡೆಪ್ಪ ದಿಂಡವಾರ, ನಿಂಗು ಯಂಭತ್ನಾಳ, ಮಿಯಾಜ್ ಯಲಗಾರ, ನಾಗೇಶ ಶೆಟಗಾರ ಇದ್ದರು.
Subscribe to Updates
Get the latest creative news from FooBar about art, design and business.
ಜೆಡಿಎಸ್ಸಿನ ರಾಜುಗೌಡ ಗೆಲುವಿಗಾಗಿ ಅಭಿಮಾನಿಗಳಿಂದ ದೀರ್ಘದಂಡ ನಮನ
Related Posts
Add A Comment