ದೇವರಹಿಪ್ಪರಗಿ: ಚುನಾವಣೆಯಲ್ಲಿ ಜನತೆ ಜಾತಿ ಆಧಾರದ ಮೇಲೆ ಮತ ನೀಡದೇ ಅಭಿವೃದ್ಧಿ ಪರವಾಗಿ ಮತ ನೀಡಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.
ಪಟ್ಟಣದಲ್ಲಿ ಶನಿವಾರ ಜರುಗಿದ ಬಿಜೆಪಿ ರೋಡ್ ಶೋದಲ್ಲಿ ಪಾಲ್ಗೊಂಡು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರವಾಗಿ ಮತ ಯಾಚಿಸಿ ಮಾತನಾಡಿದರು. ಶಾಸಕ ಸೋಮನಗೌಡ ಪಾಟೀಲ ಯಾವುದೇ ಜಾತಿ, ಮತ ನೋಡದೇ ಕಳೆದ ಐದು ವರ್ಷಗಳ ಕೆರೆ ತುಂಬುವುದು, ರಸ್ತೆಗಳ ನಿರ್ಮಾಣ ಸೇರಿದಂತೆ 3 ಸಾವಿರ ಕೋಟಿಗಳ ಅನುದಾನದಲ್ಲಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗ ಚುನಾವಣೆ ಬರುತ್ತಿದ್ದಂತೆ ಆಕಳ ಮುಖದ ಕೆಲವರು ಪಂಚಮಸಾಲಿ ಜಾತಿ ಆಧಾರದಲ್ಲಿ ಮತ ಯಾಚಿಸುತ್ತಿದ್ದಾರೆ. ಇವರೇ ಹಿಂದೆ 2008 ರಲ್ಲಿ ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಪಕ್ಷದ ಏಜೆಂಟ್ ರಾಗಿ ಕಾರ್ಯನಿರ್ವಹಿಸಿದ್ದಾರೆ. ಆವಾಗ ಇವರ ಜಾತಿಯ ಪ್ರೇಮ ಎಲ್ಲಿ ಹೋಗಿತ್ತು? ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮಶ್ರೀಗಳ ಜೊತೆಗೆ ಅವಿರತ ಹೋರಾಟ ಮಾಡಿದವರು ನಾವು. ಈಗ ಜಾತಿಯ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಮತಕ್ಷೇತ್ರದ ಪಂಚಮಸಾಲಿ ಸಮುದಾಯ ಯಾವುದೇ ಕಾರಣಕ್ಕೂ ಇಂಥವರಿಗೆ ಅವಕಾಶ ನೀಡದೇ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಸೋಮನಗೌಡರನ್ನು ಬೆಂಬಲಿಸಬೇಕು ಎಂದರು.
ಕ್ಷೇತ್ರದ ಸುರಕ್ಷತೆ ನಿಮ್ಮ ಕೈಯಲ್ಲಿದೆ. ನೀವು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳಿಗೆ ಮತ ನೀಡಿದರೆ ಅಧಿಕಾರ ಹೋಗುವುದು ಒಂದೇ ಸಮುದಾಯಕ್ಕೆ ಎನ್ನುತ್ತಾ, ಹಿಂದೆ ನೋಟಬುಕ್, ಸಾಮೂಹಿಕ ವಿವಾಹ ಮಾಡಿ, ಕಾರ್ಖಾನೆ,ಉದ್ಯೋಗದ ಭರವಸೆಗಳ ಮೂಲಕ 10 ವರ್ಷ ಕ್ಷೇತ್ರವನ್ನು ಕಡೆಗಣಿಸಲಾಯಿತು. ಈಗ ಸೋಮನಗೌಡ ಶಾಸಕರಾಗಿ ಕ್ಷೇತ್ರವನ್ನು ಒಂದು ಹಂತಕ್ಕೆ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗಾಗಿ ಎಲ್ಲರಿಗೂ ಬಿಜೆಪಿ ಅನಿವಾರ್ಯ ಆದ್ದರಿಂದ ನಾಳಿನ ಚುನಾವಣೆಯಲ್ಲಿ ಬಿಜೆಪಿ ಮತ ನೀಡಲು ವಿನಂತಿಸಿದರು.
ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿ.ಎಸ್.ಪಾಟೀಲ(ನಾಗರಾಳ ಹುಲಿ), ಸಿದ್ದು ಬುಳ್ಳಾ ಮಾತನಾಡಿ ಮತ ಯಾಚಿಸಿದರು. ಈ ಮುಂಚೆ ರೋಡ್ ಶೋ ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಿಂದ ಆರಂಭಗೊAಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತ ತಲುಪಿ ಮುಕ್ತಾಯಗೊಂಡಿತು.
ಉತ್ತರ ಪ್ರದೇಶದ ಮಾಜಿಸಚಿವ ಆನಂದಸ್ವರೂಪ ಶುಕ್ಲಾಜೀ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಲ್ಕು ಬಾಗೇವಾಡಿ, ಕಾಶೀನಾಥ ತಳಕೇರಿ, ರಮೇಶ ಮ್ಯಾಕೇರಿ, ರಾವುತ ಅಗಸರ ಸೇರಿದಂತೆ ಪಕ್ಷದ ಅಭಿಮಾನಿಗಳು, ಪ್ರಮುಖರು ಇದ್ದರು.
ಬಿಜೆಪಿಯ ಸೋಮನಗೌಡರನ್ನು ಬೆಂಬಲಿಸಲು ಪಂಚಮಸಾಲಿ ಸಮುದಾಯಕ್ಕೆ ಯತ್ನಾಳ ಕರೆ
Related Posts
Add A Comment