ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಬಸವ ನಗರದ ಹನುಮಂತ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನದವರೆಗೆ ಭಾನುವಾರ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಗೆಲುವು ಸಾಽಸಬೇಕೆಂದು ಪ್ರಾರ್ಥಿಸಿ ಅವರ ಅಭಿಮಾನಿ ಬಸವರಾಜ ಭಜಂತ್ರಿ ದೀಡ್ ನಮಸ್ಕಾರ ಹಾಕಿದನು.
ಬಸವೇಶ್ವರ ದೇವಸ್ಥಾನದ ತಲುಪಿದ ನಂತರ ಬಿಜೆಪಿ ಮುಖಂಡರು ಬಸವರಾಜ ಭಜಂತ್ರಿಯನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲ ಚಿಂಚೋಳಿ, ಸಿದ್ದನಗೌಡ ಪಾಟೀಲ, ಮುತ್ತು ಕಿಣಗಿ, ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ಎಸ್.ಕೆ.ಬೆಳ್ಳುಬ್ಬಿ ಅವರು ಎರಡು ಸಲ ಕ್ಷೇತ್ರದ ಶಾಸಕರಿದ್ದ ಸಂದರ್ಭದಲ್ಲಿ ಬಸವನಬಾಗೇವಾಡಿಯಲ್ಲಿ ಬಸ್ ಡಿಪೋ, ೨೨೦ ಮೆಗಾ ವ್ಯಾಟ್ ವಿದ್ಯುತ್ ಸ್ಟೇಶನ್, ಕುಡಿಯುವ ನೀರಿನ ವ್ಯವಸ್ಥೆ, ಬಸವೇಶ್ವರ ದೇವಸ್ಥಾನವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರ್ಪಡೆ, ಮಿನಿ ವಿಧಾನಸೌಧ ಉದ್ಘಾಟನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ೧೦ ಸಾವಿರ ಮತಗಳ ಅಂತರದಿಂದ ಎಸ್.ಕೆ.ಬೆಳ್ಳುಬ್ಬಿ ಅವರು ಆಯ್ಕೆಯಾಗುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಬಿಜಾಪುರ, ರಾಜು ಮುಳವಾಡ,ಹುಲಗಾಜಿ ಕಲಾಲ, ಎಸ್.ಎಸ್.ಹಿರೇಮಠ, ಸಂಗಮೇಶ ವಾಡೇದ, ಬಂದೇನವಾಜ ವಾಲೀಕಾರ, ವಿಶ್ವನಾಥ ಹಿರೇಮಠ, ಪ್ರಶಾಂತ ಪವಾರ, ಗೋವಿಂದ ಪವಾರ, ಪ್ರಶಾಂತ ಪೂಜಾರಿ, ಸದಾನಂದ ಕಲ್ಲೂರ, ಡಾ.ಅಂಬರೀಶ ಮಿಣಜಗಿ, ಸುರೇಶ ನಾಯಕ, ಸಂತೋಷ ನಾಯಕ, ಸ್ವರೂಪರಾಣಿ ಬಿಂಜಲಬಾವಿ, ವಿಜಯಲಕ್ಷ್ಮೀ ಬಿರಾದಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಬೆಳ್ಳುಬ್ಬಿ ಗೆಲುವಿಗೆ ಪ್ರಾರ್ಥಿಸಿ ಅಭಿಮಾನಿಯಿಂದ ದೀಡನಮಸ್ಕಾರ
Related Posts
Add A Comment