ಇಂಡಿ: ಹಾಲುಮತ ಸಮಾಜದ ಪಟ್ಟದ ದೇವರಿಗೆ ಮತ್ತು ಮಠದ ಪೂಜ್ಯರಿಗೆ ಶನಿವಾರ ಸುರಪುರ ಪಂಕ್ಸನ ಹಾಲ್ ನಲ್ಲಿ ನಡೆದ ಸಭೆಗೆ ತಪ್ಪು ಸಂದೇಶ ನೀಡಿ ಕರೆಸಲಾಗಿತ್ತು ಎಂದು ಎಲ್ಲ ಹಾಲಮತ ಸಮಾಜದ ಪಟ್ಟದ ದೇವರು ಮತ್ತು ಮಠದ ಪೂಜ್ಯರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಮುಖಂಡ ರೇವಣಸಿದ್ದ ಗೋಡಕೆ ಮಾತನಾಡಿ, ಕಾಂಗ್ರೆಸಿನ ಕೆಲವು ಮುಖಂಡರು ಶಾಸಕರ ಜೊತೆಗೂಡಿ ಹಾಲುಮತ ಸಮಾಜದ ದುರ್ಬಳಕೆ ಮಾಡಿಕೊಂಡು, ಸಮಾಜದ ಮತಗಳನ್ನು ಒಡೆಯುವ ಹುನ್ನಾರ ಮಾಡಿ, ಕೆಲವು ವ್ಯಕ್ತಿಗಳು ಸಮಾಜಕ್ಕೆ ಕೆಟ್ಟ ಹೆಸರು ತರುವ ಮತ್ತು ಸಮಾಜದಲ್ಲಿ ರಾಜಕೀಯ ಮಾಡಿ ಅದರ ಲಾಭ ತರುವ ಪ್ರಯತ್ನ ಮಾಡಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿದರು.
ಸಮಾಜದ ಮುಖಂಡ ಬಿ.ಬಿ. ಪಾಟೀಲ ತಾಂಬಾ ಮಾತನಾಡಿ, ಈಗಾಗಲೇ ಎಲ್ಲ ಪೂಜ್ಯರು ನಮಗೆ ಎಲ್ಲ ಪಕ್ಷಗಳು ಅಷ್ಟೆ, ನಾವು ಯಾರು ಬಂದರೂ ಆಶೀರ್ವಾದ ಮಾಡುತ್ತೇವೆ. ನಾವು ಜಾತಿ ರಾಜಕಾರಣ ಮಾಡುವದಿಲ್ಲ. ಎಲ್ಲ ಸಮುದಾಯ ಬೆಂಬಲದಿAದ ಮಾತ್ರ ವಿಧಾನಸಭೆಗೆ ಆಯ್ಕೆಯಾಗಲು ಸಾಧ್ಯ ಎಂದು ಸ್ಪಷ್ಟನೆ ನೀಡಿದ್ದಾರೆ. ಅದಲ್ಲದೆ ಕಾಂಗ್ರೆಸ್ ಬೆಂಬಲಿತ ಹಾಲಮತದ ಸಭೆಗೂ ಮತ್ತು ಹಾಲಮತ ಸಮಾಜಕ್ಕೂ ಏನೂ ಸಂಬAಧವಿಲ್ಲ. ಹಾಲುಮತ ಸಮುದಾಯ ಎಲ್ಲ ಪಕ್ಷಗಳನ್ನು ಗೌರವಿಸುತ್ತದೆ ಎಂದರು.
ಮಾವಿನಹಳ್ಳಿಯ ಕೆಂಚಪ್ಪ ಶ್ರೀಗಳು, ಹಿರೇರೂಗಿಯ ಲಕ್ಷö್ಮಣ ಪೂಜಾರಿ ಶ್ರೀಗಳು, ಹಿರೇರೂಗಿಯ ಮಲ್ಲಪ್ಪ ಪೂಜಾರಿ ಶ್ರೀಗಳು, ತೆನೆಹಳ್ಳಿಯ ರಾಮಣ್ಣ ಪೂಜಾರಿ ಶ್ರೀಗಳು, ಶಿರಗೂರದ ಯಲ್ಲಾಲಿಂಗ ಶ್ರೀಗಳು, ಸಾತಪುರದ ಮಾಯಪ್ಪ ಪೂಜಾರಿ ಶ್ರೀಗಳು, ಹಿರೇರೂಗಿ ಚಂದ್ರಾಮ ಪೂಜಾರಿ ಶ್ರೀಗಳು, ತೆನೆಹಳ್ಳಿಯ ಶಿವರಾಯ ಪೂಜಾರಿ ಶ್ರೀಗಳು, ಹಿರೇರೂಗಿಯ ಜಟ್ಟಿಂಗರಾಯ ಶ್ರೀಗಳು, ತೆನೆಹಳ್ಳಿಯ ರೇವಣಸಿದ್ದ ಪೂಜಾರಿ ಶ್ರೀಗಳು ಒಕ್ಕೊರಲಿನಿಂದ ತಪ್ಪು ಸಂದೇಶ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ವೇದಿಕೆಯ ಮೇಲೆ ಪದ್ಮಣ್ಣ ರೂಗಿ, ಮಾರತಂಡ ಗುಡ್ಲ, ಮಾಳಪ್ಪ ಗುಡ್ಲ, ಸಿದ್ದಪ್ಪ ಗುನ್ನಾಪುರ, ಹೆಗ್ಗಪ್ಪ ಗುಡ್ಲ, ಬಸಪ್ಪ ಪೂಜಾರಿ, ಆರ್.ಕೆ. ಪಾಟೀಲ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment