Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೊಲೆ ಹಿಂದೆ ಚುನಾವಣೆ ದೃಷ್ಟಿಕೋನ :ಅಣ್ಣಿಗೇರಿ
(ರಾಜ್ಯ ) ಜಿಲ್ಲೆ

ಕೊಲೆ ಹಿಂದೆ ಚುನಾವಣೆ ದೃಷ್ಟಿಕೋನ :ಅಣ್ಣಿಗೇರಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ನಡೆದ ಕಾರ್ಪೊರೇಟರ್ ಪತಿ ಹೈದರ್ ಅಲಿ ಕೊಲೆ ಪ್ರಕರಣ | ಕಾಣದ ಕೈಗಳ ಕೈವಾಡ | ವಿಜಯಪುರ ನಗರ ಕ್ಷೇತ್ರದಿಂದ ಎಐಎಂಐಎಂ ಟಿಕೆಟ್ ಕೇಳಿದ್ದ ಹೈದರ್| ಆಡಿಯೋ ಬಹಿರಂಗ | ಮತದಾನ ದಿನ ಪೊಲೀಸ್ ಭದ್ರತೆ ಹೆಚ್ಚಿಸಲು ಆಗ್ರಹ

ವಿಜಯಪುರ: ನಗರದಲ್ಲಿ ಶನಿವಾರ ಬೆಳಗ್ಗೆ ನಡೆದ ಶೂಟೌಟ್‌ನಲ್ಲಿ ಕೊಲೆಗೀಡಾಗಿರುವ ವ್ಯಕ್ತಿ ಸಾರ್ವತ್ರಿಕ ವಿಧಾನÀಸಭೆ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಎಐಎಂಐಎA ಟಿಕೇಟ್ ಆಕಾಂಕ್ಷಿಯಾಗಿದ್ದ, ಈಗ ಆ ವ್ಯಕ್ತಿಯ ಕೊಲೆ ನಡೆದಿರುವುದು ವಿಧಾನಸಭೆ ಚುನಾವಣೆ ದೃಷ್ಟಿಕೋನವನ್ನಿರಿಸಿಕೊಂಡು ನಡೆದ ಕೊಲೆಯಾಗಿದೆ ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಗಂಭೀರವಾಗಿ ಆರೋಪಿಸಿದರು.
ಭಾನುವಾರ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕೊಲೆಗೀಡಾಗಿರುವ ವ್ಯಕ್ತಿ ಹಾಗೂ ಎಐಎಂಐಎA ಪಕ್ಷದ ಅಧ್ಯಕ್ಷರು ಮಾತನಾಡಿರುವ ಆಡಿಯೋ ಬಿಡುಗಡೆಗೊಳಿಸಿದರು. ಈ ಆಡಿಯೋ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದರು.
ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ತಮಗೆ ಬಿ-ಫಾರ್ಮ್ ತಪ್ಪಿರುವ ವಿಷಯವಾಗಿ ಕೊಲೆಗೀಡಾಗಿರುವ ವ್ಯಕ್ತಿ ಎಐಎಂಐಎA ಅಧ್ಯಕ್ಷರ ಜೊತೆ ಮಾತನಾಡುತ್ತಿರುವ ಸಂಭಾಷಣೆಯನ್ನು ಬಿಡುಗಡೆಗೊಳಿಸಿದ ಅಣ್ಣಿಗೇರಿ, ಈ ಆಡಿಯೋ ಮುಖಾಂತರ ಚುನಾವಣೆ ದೃಷ್ಟಿಕೋನದಲ್ಲಿರಿಸಿಕೊಂಡೇ ಕೊಲೆ ನಡೆದಿರುವುದು ಸ್ಪಷ್ಟವಾಗುತ್ತದೆ, ಈ ಬಗ್ಗೆ ಚುನಾವಣೆಗೂ ಮುನ್ನವೇ ತನಿಖೆಯಾಗಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದರು.
ಸಂಭಾಷಣೆಯಲ್ಲಿ ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ, ನಿನ್ನೆ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಹೆಸರೂ ಸಹ ಉಲ್ಲೇಖವಾಗಿದೆ ಎಂದ ಅಣ್ಣಿಗೇರಿ ಆಡಿಯೋವನ್ನು ಬಹಿರಂಗಪಡಿಸಿದರು.
ಕೆಲವೊಂದು ಪೊಲೀಸ್ ಅಧಿಕಾರಿಗಳು ಉತ್ತರ ಪ್ರದೇಶಕ್ಕೆ ಹೋಗಿ ರೌಡಿಗಳನ್ನು ಮಟ್ಟ ಹಾಕುವ ಟ್ರೇನಿಂಗ್ ತೆಗೆದುಕೊಂಡು ಬರಬೇಕು. ಗೂಂಡಾಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು. ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಮೇಲೆ ನಡೆದ ಶೂಟೌಟ್ ಪ್ರಕರಣ ನಡೆದಿರುವುದು ವಿಧಾನಸಭೆ ಚುನಾವಣೆಯ ದೃಷ್ಟಿಕೋನವನ್ನು ಇರಿಸಿಕೊಂಡು ನಡೆದ ಕೊಲೆಯಾಗಿದೆ ಹೊರತು ವೈಯುಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆಯಲ್ಲ, ಕೂಡಲೇ ಈ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಿ ಈ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರು ದಕ್ಷ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತರಾತುರಿಯಲ್ಲಿ ಶೂಟೌಟ್ ನಡೆದಿರುವುದು ವೈಯುಕ್ತಿಕ ದ್ವೇಷದಿಂದ ನಡೆದಿದೆ ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ. ಯಾವ ಒತ್ತಡಕ್ಕೂ ಒಳಗಾಗದೇ, ಪ್ರಭಾವಿಗಳಿಗೆ ಮಣಿಯದೇ ಈ ಪ್ರಕರಣದಲ್ಲಿರುವ ಕಾಣದ ಕೈಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.


ಕಂಟ್ರಿ ಪಿಸ್ತೂಲ್ ಮೂಲಕ ಈ ಕೊಲೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಚೆಕ್‌ಪೋಸ್ಟ್ಗಳಿಂದ ಕಂಟ್ರಿ ಪಿಸ್ತೂಲ್ ಹೇಗೆ ನುಸುಳಿ ಬಂದಿತು? ಈ ಹಿಂದೆಯೇ (ಮೇ.೧) ಸ್ವಾಮಿ ವಿವೇಕಾನಂದ ಸೇನೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗೂಂಡಾಗಳನ್ನು ಗಡಿಪಾರು ಮಾಡುವಂತೆ ಒತ್ತಾಯ ಮಾಡಿತ್ತು, ಆಗಲೇ ಅವರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಮಾಡಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ ಎಂದರು.
ಕಳೆದ ೫ ವರ್ಷಗಳಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಧಿಕಾರಾವಧಿಯಲ್ಲಿ ವಿಜಯಪುರ ನಗರ ಸಂಪೂರ್ಣ ಶಾಂತರೀತಿಯಲ್ಲಿ ಇತ್ತು. ನಿನ್ನೆ ನಡೆದ ಶೂಟೌಟ್ ಪ್ರಕರಣ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಭೀಕರ ಕೊಲೆ ನಡೆದಿದೆ. ಆ ಕಂಟ್ರಿ ಪಿಸ್ತೂಲ್ ಬಂದಿದ್ದಾರೂ ಎಲ್ಲಿಂದ?
ಚೆಕ್‌ಪೋಸ್ಟಗಳನ್ನು ನುಸುಳಿದ್ದು ಹೇಗೆ? ಪಿಸ್ತೂಲ್ ಇರಿಸಿಕೊಂಡು ಓಡಾಡುವ ರೌಡಿ ಶೀಟರ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು, ರಾಜಾರೋಷವಾಗಿ ವ್ಯಕ್ತಿಯನ್ನು ಹತ್ಯೆ ಮಾಡುತ್ತಾರೆ ಎಂದರೆ ನಗರದ ಜನತೆ ಭಯಭೀತರಾಗಿದ್ದಾರೆ, ಆಗಲೇ ಗೂಂಡಾಗಳನ್ನು ಹದ್ದುಬಸ್ತಿನಲ್ಲಿಟ್ಟಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲವೇನೋ? ಎಂದರು.
ಚುನಾವಣಾ ಸಮಯವಾಗಿರುವುದರಿಂದ ಇಡೀ ನಗರವೇ ಒಂದು ರೀತಿ ಸೂಕ್ಷö್ಮ ಪ್ರದೇಶವಾಗಿದೆ, ಹೀಗಾಗಿ ಕೇಂದ್ರ ಸೇನಾ ಪಡೆ ಹಾಗು ಮಿಲಿಟರಿ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಗರದಲ್ಲಿ ನಿಯೋಜಿಸಬೇಕು. ಭೋಗಸ್ ಮತದಾನ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಕೊಲೆಗೀಡಾದ ವ್ಯಕ್ತಿಯ ಸಮಗ್ರ ಕಾಲ್ ಡಿಟೇಲ್ಸ್ ಓಪನ್ ಮಾಡಿದರೆ ಎಲ್ಲವೂ ಬಹಿರಂಗವಾಗುತ್ತದೆ ಎಂದು ರಾಘವ ಅಣ್ಣಿಗೇರಿ ಹೇಳಿದರು.
ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಮಹಾನಗರಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಜು ಕುರಿ, ಎಂ.ಎಸ್. ಕರಡಿ, ಮಹೇಶ ಒಡೆಯರ, ರಾಹುಲ್ ಜಾಧವ, ಕುಮಾರ ಗಡಗಿ, ಕಿರಣ ಪಾಟೀಲ, ಜವಾಹರ ಗೋಸಾವಿ, ಮುಖಂಡರಾದ ಗುರು ಗಚ್ಚಿನಮಠ, ವಿವೇಕ ಸಜ್ಜನ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನನಗೆ ಮತ್ತು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಭದ್ರತೆ ಒದಗಿಸಿ

ನನ್ನ ಮೇಲೆ ಈಗಾಗಲೇ ದೇಶವಿರೋಧಿಗಳಿಂದ ಜೀವದ ಬೆದರಿಕೆ ಇದೆ. ಇದನ್ನು ಪೊಲೀಸರೆ ನನಗೆ ತಿಳಿಸಿ ಜಾಗರೂಕರಾಗಿರಲು ತಿಳಿಸಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಆತ್ಮರಕ್ಷಣೆಗಾಗಿ ಇರುವ ಪಿಸ್ತೂಲನ್ನು ಜಿಲ್ಲಾಧಿಕಾರಿಗಳಿಗೆ ಜಮಾವಣೆ ಮಾಡಿದ್ದೇನೆ. ಹೀಗಿರುವಾಗ ಆತ್ಮರಕ್ಷಣೆ ಹೇಗೆ ಸಾಧ್ಯ? ಯಾರಿಗೆ ಜೀವಭಯವಿದೆಯೋ ಲೈಸನ್ಸ್ ಗನ್‌ಗಳನ್ನು ಅವರ ಬಳಿ ಇಟ್ಟುಕೊಳ್ಳಲು ವಿಶೇಷ ಅನುಮತಿ ನೀಡಬೇಕ…

BIJAPUR NEWS bjp haidar public news
Share. Facebook Twitter Pinterest Email Telegram WhatsApp
  • Website

Related Posts

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!
    In (ರಾಜ್ಯ ) ಜಿಲ್ಲೆ
  • ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ
    In (ರಾಜ್ಯ ) ಜಿಲ್ಲೆ
  • ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ ಭೂಸನೂರ
    In (ರಾಜ್ಯ ) ಜಿಲ್ಲೆ
  • ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ ಪ್ರಶಿಕ್ಷಣಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ರೈತರ ಬೇಡಿಕೆಯಂತೆ ಪರಿಹಾರ ದರ ನಿಗದಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಯಲ್ಲಿ ಮತ್ತೆ ಹೆಚ್ಚಾದ ಒಳ ಹರಿವು
    In (ರಾಜ್ಯ ) ಜಿಲ್ಲೆ
  • ಹಳ್ಳ ದಾಟಲು ಹರಸಾಹಸ ಪಟ್ಟ ಶಿಕ್ಷಕರು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.