ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ೫೦ ಸಾವಿರ ಮತಗಳಿಂದ ಗೆಲ್ಲಬೇಕು ಎಂದು ಪ್ರಾರ್ಥಿಸಿ ತಾಲೂಕಿನ ಹುನಕುಂಟಿ ಗ್ರಾಮದ ಯಲಗೂರೇಶ ಸೀತಿಮನಿ ತಮ್ಮೂರಿನಿಂದ ಯಲಗೂರಿನ ಶ್ರೀ ಹನುಮಾನ ದೇವಸ್ಥಾನದ ಮಾರ್ಗವಾಗಿ ಮುದ್ದೇಬಿಹಾಳ ಪಟ್ಟಣದ ಬಜಾರಿನ ದ್ಯಾಮವ್ವ ದೇವಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಗೋವಾ ಕನ್ನಡಿಗರ ಹೋರಾಟ ಸಮೀತಿ ಅಧ್ಯಕ್ಷ ಸಿದ್ದಣ್ಣ ಮೇಟಿ, ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಭ್ರಷ್ಠ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯಲು ಅಮಾಯಕ ಹಳ್ಳಿಗಳ ಜನತೆ ಕೂಡ ದೇವರ ಮೊರೆಹೋಗುತ್ತಿರುವುದು ನೋಡಿದರೆ ಈಗಾಗಲೇ ಎಲ್ಲ ದೇವರುಗಳ ಆಶೀರ್ವಾದ ಸಿ.ಎಸ್.ನಾಡಗೌಡರಿಗೆ ಆಗಿದೆ ಎಂದರು.
ಪ್ರಮುಖರಾದ ಅಶೋಕ ನಾಡಗೌಡ, ಸಿ.ಜಿ.ವಿಜಯಕರ, ಎಚ್.ವಾಯ್.ಪಾಟೀಲ ವಕೀಲರು, ಮಲ್ಲು ಅಪರಾಧಿ ಸೇರಿದಂತೆ ಅನೇಕ ಕಾರ್ಯಕರ್ತರು ಪಟ್ಟಣಕ್ಕೆ ಯಲಗೂರೇಶ ಅವರು ಆಗಮಿಸುತ್ತಿದ್ದಂತೆಯೇ ದೇವಸ್ಥಾನದವರೆಗೆ ಅವರ ಜೊತೆಯೇ ಸಾಗಿ ಪೂಜಾ ವಿಧಾನದಲ್ಲಿ ಸಾಥ್ ನೀಡಿದರು.
Related Posts
Add A Comment