ಇಂಡಿ: ತಳವಾರ, ಹಡಪದ, ಮಡಿವಾಳದಂತಹ ಅನೇಕ ಸಮುದಾಯದ ಮೀಸಲಾತಿಗಾಗಿ ವಿಧಾನಸಭೆಯ ಜೊತೆಗೆ ಕೇಂದ್ರದ ಮೋದಿಜಿಯವರು ಮತ್ತು ಅಮೀತಶಹಾ ಸೇರಿದಂತೆ ಇನ್ನಿತರ ಜೊತೆ ಚರ್ಚಿಸಿ ಮೀಸಲಾತಿ ದೊರೆಯುವಲ್ಲಿ ಶ್ರಮಿಸಿದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವಾಗ ರಾಜ್ಯದಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತು.ಸಿAದಗಿ ಉಪ ಚುನಾವಣೆಯಲ್ಲಿ ಈ ಬಗ್ಗೆ ಭರವಸೆ ನೀಡಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸಿದ್ದೇವೆ ಎಂದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸುವಾಗ ಇತರೆ ೨ ಎ ಮೀಸಲಾತಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಸಮುದಾಯವನ್ನು ೨ ಬಿ, ೨ ಡಿ ಮೀಸಲಾತಿ ಮಾಡಿ ಸೇರಿಸಲಾಗಿದೆ ಎಂದರು.
ಗಾಣಿಗೇರ ಸಮುದಾಯಕ್ಕೆ ೨ ಎ ಮೀಸಲಾತಿ ತೆಗೆಯುವ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಬರುವ ದಿನಗಳಲ್ಲಿ ಪಂಚಮಸಾಲಿ,ಗಾಣಿಗ ಸೇರಿದಂತೆ ಎಲ್ಲ ಲಿಂಗಾಯತ ಸಮುದಾಯಗಳಿಗೆ ಒಂದಾಗುವAತೆ ಪ್ರಯತ್ನಿಸುತ್ತೇವೆ. ಯಾವ ಸಮುದಾಯಕ್ಕೂ ಮೀಸಲಾತಿಯಲ್ಲಿ ಅನ್ಯಾಯ ಮಾಡುವದಿಲ್ಲ. ಮೀಸಲಾತಿ ಕೊಡಿಸುವಲ್ಲಿ ನನ್ನ ಪಾತ್ರವೂ ಮುಖ್ಯ ಇದೆ ಎಂದರು.
ಪ್ರತಿಯೊಬ್ಬರು ಮತ ಹಾಕುವಾಗ ಜೈ ಭಜರಂಗಬಲಿ ಎಂದು ಓಟು ಹಾಕಿ ಎಂದು ಹೇಳಿದ ಅವರು ಭಜರಂಗದಳವು ಕರ್ನಾಟಕದ ಜನರ ಮನಸ್ಸಿನಲ್ಲಿ ಇದ್ದು ಅದು ಯಾರಿಂದಲೂ ನಿಷೇಧ ಮಾಡಲು ಸಾಧ್ಯವಿಲ್ಲ ಎಂದರು.
ಇAಡಿ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೇಟಗಾಗಿ ಹತ್ತು ಜನ ಪ್ರಯತ್ನಿಸಿದ್ದರು. ಕಾಸುಗೌಡರಿಗೆ ಟಿಕೆಟು ಸಿಕ್ಕಿದೆ. ಆದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದು ಎಲ್ಲರಿಗೂ ಸರಕಾರ ರಚನೆಯಾದಲ್ಲಿ ಗೌರವ ಸ್ಥಾನ ನೀಡಲಾಗುವುದೆಂದರು.
ಉತ್ತರಾಖಂಡದ ಶಿಕ್ಷಣ ಸಚಿವ ಧನಸಿಂಗ ರಾವತ, ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ,ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಉಪಾಧ್ಯಕ್ಷ ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವಡೆ, ಶಂಕರಗೌಡ ಪಾಟೀಲ, ಅಶೋಕ ಬಿರಾದಾರ, ಮುತ್ತು ದೇಸಾಯಿ, ಅನೀಲ ಜಮಾದಾರ ಮತ್ತಿತರರು ಮಾತನಾಡಿದರು.
ಇದೇ ವೇಳೆ ಇಂಡಿಯ ಗಣ್ಯರಾದ ಶ್ರೀಕಾಂತ ದೇವರ, ಚಂದು ದೇವರ ಸೇರಿದಂತೆ ನೂರಾರು ಕಾರ್ಯಕರ್ತರು ಪಕ್ಷ ಸೇರ್ಪಡೆ ಯಾದರು.
ವೇದಿಕೆಯ ಮೇಲೆ ಬಿ.ಎಸ್.ಪಾಟೀಲ ಹಿರೆಬೇವನೂರ, ಜಗದೀಶ ಕ್ಷತ್ರಿ, ಭೀಮಸಿಂಗ ರಾಠೋಡ, ವಿಜಯಲಕ್ಷಿö್ಮÃ ರೂಗಿಮಠ, ರವಿ ಖಾನಾಪುರ, ಅಪ್ಪುಗೌಡ ಪಾಟೀಲ, ಸತೀಶ ಕುಲಕರ್ಣಿ, ವೇಂಕಟೇಶ ಕುಲಕರ್ಣಿ ಮತ್ತಿತರಿದ್ದರು.
Related Posts
Add A Comment