ವಿಜಯಪುರ: ಕಾಂಗ್ರೆಸ್ ನವರು ಯಾರ ಕೈಗೆ ಹಣ ಕೊಟ್ಟಿದ್ದಾರೋ, ಅವರೆಲ್ಲರೂ ಎಲ್ಲೆಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಬಗ್ಗೆ ನಿಗಾ ಇಡಲು ಜನರನ್ನು ಬಿಟ್ಟಿದ್ದಾರೆ. ಹಣ ಪಡೆದವರು ಹುಷಾರ್ ಆಗಿರಬೇಕು. ಚುನಾವಣೆ ಬಳಿಕ ತೊಂದರೆ ಕೊಡಬಹುದು ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಕಿವಿಮಾತು ಹೇಳಿದರು.
ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ನಂತರ ಹಿಂದಿನ ಚುನಾವಣೆ ಬಳಿಕ ಮಾಡಿದಂತೆ, ಈ ಬಾರಿಯೂ ಹಣ ಪಡೆದವರ ಮನೆಗೆ ನುಗ್ಗಿ ಹೊಡೆದು ಹಣ ಮರಳಿ ಪಡೆಯುತ್ತಾರೆ ಎಚ್ಚರ ಇರಲಿ ಎಂದರು.
ಮುಂದಾಗುವ ಸಮಸ್ಯೆ ಅರಿತ ಹಲವರು ಹಣ ಮರಳಿ ನೀಡಿರುವುದು ತಿಳಿದು ಬಂದಿದೆ. ಗೂಂಡಾಗಿರಿ ಪ್ರವೃತ್ತಿಯ ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆಯೂ ನೀಡಿದ ಹಣ, ಬಾಂಡೆ ಸಾಮಾನುಗಳನ್ನು ಹೆದರಿಸಿ, ಒದ್ದು ಮರಳಿ ಪಡೆದ ಉದಾಹರಣೆಗಳಿವೆ. ಇಂಟಲಿಜೆನ್ಸ್ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತವಾಗಿದೆ. ಬಿಜೆಪಿ 12,000-15,000 ಮತಗಳ ಅಂತರದಿಂದ ಗೆಲುವು ಖಚಿತ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಂದ ಹಣ ಪಡೆದವರು ಹುಷಾರಾಗಿರಬೇಕು ಎಂದು ಸಲಹೆ ನೀಡಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಇದ್ದರು.
Related Posts
Add A Comment