ಢವಳಗಿ: ಸಮೀಪದ ರೂಢಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ)ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿಗಳೊಂದಿಗೆ ಬಹಿರಂಗ ಪ್ರಚಾರ ಮಾಡಿ ಮತ ಯಾಚಿಸಿದರು.
ಬಳಿಕ ರೂಢಗಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರು, ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಿದೆ. ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಎರಡುಸಾವಿರ ರೂಪಾಯಿಗಳು,ಪ್ರತಿ ತಿಂಗಳಿಗೆ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಪ್ರತಿ ಮನೆಗೂ ಪ್ರತಿ ತಿಂಗಳು ಎರಡು ನೂರು ಯೂನಿಟ್ ವಿದ್ಯುತ್ ಉಚಿತ ಗೃಹ ಜ್ಯೋತಿ ಯೋಜನೆ, ಗ್ಯಾಸ್ ಸಿಲಿಂಡರಗೆ ಐದುನೂರು ರೂಪಾಯಿ, ಜಿ ಎಸ್ ಟಿ ಪರಿಹಾರಕ್ಕೆ ಐದುನೂರು ರೂಪಾಯಿ,ಬೆಲೆ ಏರಿಕೆಯ ಪರಿಹಾರಕ್ಕೆ ಒಂದುಸಾವಿರ ರೂಪಾಯಿಗಳು,ಕೊಡುವ ಸರ್ಕಾರ ಅದು ಕಾಂಗ್ರೇಸ್ ಸರ್ಕಾರ ಸದೃಢ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಕಾಂಗ್ರೇಸನ್ನು ಗೆಲ್ಲಿಸಿ.ಮೊದಲು ಗ್ಯಾಸ್ ಸಿಲಿಂಡರ್ ಬೆಲೆ ನಾಲ್ಕುನೂರ ಐವತ್ತು ರೂಪಾಯಿಗೆ ಸಿಗುವ ಸಿಲಿಂಡರ್ ಇವಾಗ ಹನ್ನೆರಡು ನೂರಐವತ್ತು ರೂಪಾಯಿಗೆ ಸಿಗುವ ಹಾಗೆ ಮಾಡಿದೆ ಬಿಜೆಪಿ ಸರ್ಕಾರ ಬಿಜೆಪಿ ಸರ್ಕಾರ ನಿಮ್ಮ ಪರನೋ ಕಾಂಗ್ರೆಸ್ ಸರ್ಕಾರ ನಿಮ್ಮ ಪರನೋ ಅಂತ ಒಮ್ಮೆ ಯೋಚಿಸಿ ಮೇ ಹತ್ತರಂದು ನನಗೆ ಮತವನ್ನು ಕೊಡಿ ಎಂದು ಹೇಳಿದರು. ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗಣೇಶ್ ನಾರಾಯಣಸ್ವಾಮಿ, ಶಂಕರಗೌಡ ಹಿರೆಗೌಡರ, ಗೋವಾ ಕನ್ನಡಿಗರ ಕಸಾಪ ಅದ್ಯಕ್ಷ ಸಿದ್ದಣ್ಣ ಮೇಟಿ, ಹುಲಗಪ್ಪ ನಾಯ್ಕಮಕ್ಕಳ, ಗ್ರಾಮದ ಮುಖಂಡರಾದ ಬಸವರಾಜ ನಿಂ ದೊಡಮನಿ, ಗ್ರಾ ಪಂ ಸದಸ್ಯ ಸದಾಶಿವ ಸುಳಿಭಾವಿ, ವಡ್ಡರ , ಲಕ್ಷ್ಮಣ ಬಮ್ಮನಗಿ, ಪರಸು ರಾಠೋಡ, ರಾಜು ಈಳಗೇರ, ದಸಗಿರಾಗೌಡ ಪಾಟೀಲ, ಚಿದಾನಂದ ತಳವಾರ, ಮುತ್ತು ಮೆಣಸಿನಕಾಯಿ, ಲಕ್ಕಪ್ಪ ಮಾದರ, ಚಂದ್ರು ದೊಡಮನಿ, ಹಳ್ಳೆಪ್ಪ ಛಲವಾದಿ, ನಾಗಪ್ಪ ಈಳಗೆರ, ಬಸಪ್ಪ ಮಾದರ, ಶ್ರೀಶೈಲ ಸುಳಿಭಾವಿ, ಈರಣ್ಣ ಬೆಲ್ಲದ, ಶರಣು ಕೋರಿ, ಶ್ರಿಧರ ದೊಡಮನಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ದೇಶದ ಅಭಿವೃದ್ದಿಗೆ ಕಾಂಗ್ರೆಸ್ ಕೊಡುಗೆ ಅಪಾರ :ಸಿ.ಎಸ್.ನಾಡಗೌಡ
Related Posts
Add A Comment