ಚಿಮ್ಮಡ: ಚಲನಚಿತ್ರ ನಟಿ ತಾರಾ ಅನುರಾಧ ಚಿಮ್ಮಡ ಗ್ರಾಮದಲ್ಲಿ ಭರ್ಜರಿ ರೋಡ ಷೋ ನಡೆಸಿ ಬಿಜೆಪಿ ಅಭ್ಯರ್ಥಿ ಶಾಸಕ ಸಿದ್ದು ಸವದಿ ಪರ ಮತಯಾಚನೆ ಮಾಡಿದರು.
ಸಾಯಂಕಾಲ ನಾಲ್ಕು ಘಂಟೆಗೆ ತೆರೆದ ವಾಹನದಲ್ಲಿ ಗ್ರಾಮಕ್ಕಾಗಮಿಸಿದ ತಾರಾ ಹಾಗೂ ಸಿದ್ದು ಸವದಿ ಅವರಿಗೆ ನೆರೆದ ನೂರಾರು ಜನ ಕಾರ್ಯಕರ್ತರು ಪುಷ್ಪವೃಷ್ಠಿ ಮಾಡುವ ಮೂಲಕ ಅವರನ್ನು ಬರಮಾಡಿಕೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ಅವರು ಅಭಿವೃದ್ದಿ, ಹಾಗೂ ದೇಶದ ಭವಿಷ್ಯಕ್ಕಾಗಿ ಸಿದ್ದು ಸವದಿಯವರನ್ನು ಬೆಂಬಲಿಸುವAತೆ ಮತದಾರರಲ್ಲಿ ಮನವಿ ಮಾಡಿದರು. ಚಿತ್ರ ನಟಿಯನ್ನು ಕಾಣಲು ಗ್ರಾಮದ ಮಹಿಳೆಯರು ರಸ್ತೆಯುದ್ದಕ್ಕೂ ನಿಂತು ತಾರಾ ಅವರಿಗೆ ಕೈಬೀಸಿದರು. ಗ್ರಾಂ.ಪA. ಅಧ್ಯಕ್ಷ ಆನಂದ ಕವಟಿ, ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ವಿಜಯಕುಮಾರ ಪೂಜಾರಿ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ, ಪರಪ್ಪಾ ನೇಸೂರ, ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ ಸೇರಿದಂತೆ ಹಲವಾರು ಪ್ರಮುಖರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
Related Posts
Add A Comment