ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕರ್ನಾಟಕ ಸರ್ಕಾರದ ವತಿಯಿಂದ ಇದೇ ಫೆ.೨೬, ೨೭ ಮತ್ತು ೨೮ರಂದು ಬೆಂಗಳೂರಿನ ಅಂತರರಾಷ್ಟ್ರೀಯ ಕನ್ವೆನಶನ್ ಸೆಂಟರ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂ-ಸ್ಟೇ, ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ ಹೋಲ್ಡರ್‌ಗಳಿಗೆ ವ್ಯಾಪಾರ-ವಹಿವಾಟು ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಆಸಕ್ತ ಹೊಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂ-ಸ್ಟೇ, ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ ಹೋಲ್ಡರ್‌ಗಳು ತಮ್ಮ ಉದ್ದಿಮೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಲು ಸುವರ್ಣಾವಕಾಶವಿದ್ದು, ಈ ಕಾರ್ಯಕ್ರಮದಲ್ಲಿ ವ್ಯಾಪಾರ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತ ಹೊಂದಿರುವ ಜಿಲ್ಲೆಯ ಉದ್ದಿಮೆದಾರರು ಪ್ರವಾಸೋದ್ಯಮ ಇಲಾಖೆ ಸಮಾಲೋಚಕರಾದ ಅನಿಲಕುಮಾರ ರಾ.ಬಣಜಿಗೇರ ಮೊ: ೯೮೮೬೩೭೩೦೦೬ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
