Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ

ಇಂಡಿ ಬಸ್ ಘಟಕಕ್ಕೆ ಅಧ್ಯಕ್ಷ ಅರುಣಕುಮಾರ ಭೇಟಿ

ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳಲು ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪೊಲೀಸರ ಭರ್ಜರಿ ಬೇಟೆ: ೧೦ ಕಂಟ್ರಿ ಪಿಸ್ತೂಲ್ & ಆರೋಪಿಗಳು ವಶಕ್ಕೆ
(ರಾಜ್ಯ ) ಜಿಲ್ಲೆ

ಪೊಲೀಸರ ಭರ್ಜರಿ ಬೇಟೆ: ೧೦ ಕಂಟ್ರಿ ಪಿಸ್ತೂಲ್ & ಆರೋಪಿಗಳು ವಶಕ್ಕೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆರೋಪಿಯು ಅರಕೇರಿ ಎಲ್.ಟಿ ನಂ.೧ ಸತೀಶ ರಾಠೋಡ ಕೊಲೆ ಪ್ರಕರಣದಲ್ಲಿ ಭಾಗಿ | ಜಿಲ್ಲೆಯಲ್ಲಿ ಹಲವರಿಗೆ ಅಕ್ರಮ ಪಿಸ್ತೂಲ್‌ ಪೂರೈಕೆ | ಪೊಲೀಸರ ಕಾರ್ಯಕ್ಕೆ ಜಿಲ್ಲಾದ್ಯಂತ ಶ್ಲಾಘನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಕಂಟ್ರಿ ಪಿಸ್ತೂಲ್‌ ಗಳ ವಿಲೇವಾರಿಯ ಕಿಂಗ್ ಪಿನ್ ಸಾಗರ @ ಸುರೇಶ ರಾಠೋಡ ನನ್ನು ಫೆ.೧೩ ರಂದು ಬಂಧಿಸಿದ್ದ ಪೊಲೀಸರು ಇದೀಗ ಅಕ್ರಮ ಪಿಸ್ತೂಲ್ ಹೊಂದಿದ ೧೦ ಜನ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಪ್ರಕರಣದ ಸಂಪೂರ್ಣ ವಿವರಗಳನ್ನು ಸುದ್ದಿಗಾರರ ಮುಂದೆ ಬಿಡಿಸಿಟ್ಟರು‌.
ಆರೋಪಿ ಸಾಗರ @ ಸುರೇಶ ರಾಠೋಡ ಜಿಲ್ಲೆಯ ಹಂಚನಾಳ ಎಲ್‌ಟಿ ನಂ: 1 ನಿವಾಸಿಯಾಗಿದ್ದು ಜ.೨೮ ರಂದು ನಡೆದ ಅರಕೇರಿ ಎಲ್.ಟಿ ನಂ.೧ ರಲ್ಲಿ ನಡೆದ ಸತೀಶ ರಾಠೋಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಅವನು ನಾನಾ ಕಡೆಗೆ ಪೂರೈಕೆ ಮಾಡಿದ್ದ ೧೦ ಕಂಟ್ರಿ ಪಿಸ್ತೂಲ್ ಮತ್ತು ೨೪ ಸಜೀವ ಗುಂಡುಗಳನ್ನು ವಶಕ್ಕೆ ಪಡೆದು ಆರೋಪಿಯ ಹೆಡೆಮುರಿ ಕಟ್ಟಿ ಜಿಲ್ಲೆಯ ಪೊಲೀಸರು ಕರ್ತವ್ಯ ಮೆರೆದಿದ್ದಾರೆ.


ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೇರಿ ಎಲ್‌ಟಿ ನಂ: 1 ರ ನಿವಾಸಿ ರಮೇಶ ಗೇಮು ಲಮಾಣಿ ಈತನ ಮಗಳನ್ನು ಈ ಹಿಂದೆ ಅದೇ ಗ್ರಾಮದ ನಿವಾಸಿ ಸತೀಶ ಪ್ರೇಮಸಿಂಗ ರಾಠೋಡ ಈತನಿಗೆ ಮದುವೆ ಮಾಡಿ ಕೊಡಲು ಕೇಳಿದ್ದು, ಅದಕ್ಕೆ ರಮೇಶ ಲಮಾಣಿ ಈತನು ಒಪ್ಪದ ಕಾರಣ ಆತನ ಮಗಳು ಭಾವಿಗೆ ಹಾರಿ ಮರಣ ಹೊಂದಿದ್ದು, ಅವಳ ಸಾವಿಗೆ ಸತೀಶನೇ ಕಾರಣ ಎಂದು ಸಿಟ್ಟಾಗಿ ಕಳೆದ ಜ.28 ರಂದು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ರಮೇಶ ಗೇಮು ಲಮಾಣಿ ಹಾಗೂ ಇತರರು ಸೇರಿ, ಸತೀಶ ಪ್ರೇಮಸಿಂಗ ರಾಠೋಡ ಈತನ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 6 ಜನ ಆರೋಪಿತರನ್ನು ದಸ್ತಗೀರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸದರಿ ಪ್ರಕರಣದಲ್ಲಿ 5ನೇ ಆರೋಪಿತನಾದ ಸಾಗರ @ ಸುರೇಶ ರಾಠೋಡ, ಸಾ: ಹಂಚನಾಳ ಎಲ್‌ಟಿ ನಂ: 1 ಈತನು ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ ಗೇಮು ಲಮಾಣಿ ಈತನಿಗೆ ಕೊಲೆ ಮಾಡಲು ಅಕ್ರಮ ಪಿಸ್ತೂಲ್‌ನ್ನು ಪೂರೈಸಿದ್ದನು. ಈತನನ್ನು ಫೆ.13 ರಂದು ಬಂಧಿಸಿದ್ದು, ವಿಚಾರಣೆ ಕಾಲಕ್ಕೆ ಆತನು ವಿಜಯಪುರ ಜಿಲ್ಲೆಯ ಹಲವಾರು ಜನರಿಗೆ ಅಕ್ರಮ ಪಿಸ್ತೂಲ್‌ಗಳನ್ನು ಪೂರೈಸಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಮಾಹಿತಿಯನ್ನು ಆಧರಿಸಿ, ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತನಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ಪಡೆದವರ ಮೇಲೆ ಪೊಲೀಸರು ದಾಳಿ ಮಾಡಿ ಒಟ್ಟು 10 ಕಂಟ್ರಿ ಪಿಸ್ತೂಲ್‌ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಕಂಟ್ರಿ ಪಿಸ್ತೂಲ್ & ಸಜೀವ ಗುಂಡು ಹೊಂದಿದ ಆರೋಪಿಗಳು

1) ಪ್ರಕಾಶ ಮರ್ಕಿ ರಾಠೋಡ, ಸಾ: ಹಂಚಿನಾಳ ತಾಂಡಾ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 03 ವಿಜಯಪುರ ಗ್ರಾಮೀಣ ಠಾಣೆ.
2) ಅಶೋಕ ಪರಮು ಪಾಂಡ್ರೆ, ಸಾ: ಕರಾಡ ದೊಡ್ಡಿ, ಅರಕೇರಿ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 02 ವಿಜಯಪುರ ಗ್ರಾಮೀಣ ಠಾಣೆ
3) ಸುಜಿತ ಸುಭಾಸ ರಾಠೋಡ, ಸಾ: ಕಡಕಿ ತಾಂಡಾ, ತಾ: ತುಳಜಾಪುರ ಜಿಲ್ಲಾ: ಸೊಲಾಪುರ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 01 ವಿಜಯಪುರ ಗ್ರಾಮೀಣ ಠಾಣೆ.
4) ಸುಖದೇವ @ ಸುಖಿ ನರಸು ರಾಠೋಡ, ಸಾ: ಸಾಯಿ ಪಾರ್ಕ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 05 ಜಲನಗರ ಠಾಣೆ.
5) ಪ್ರಕಾಶ ಭೀಮಸಿಂಗ್ ರಾಠೋಡ, ಸಾ: ನಾಗಾವಿ ತಾಂಡಾ, ತಾ: ಸಿಂದಗಿ ಇವರಿಂದ ಪಿಸ್ತೂಲ್: 01, ಜೀವಂತ ಗುಂಡು: 01 ಸಿಂದಗಿ ಠಾಣೆ.
6) ಗಣೇಶ ಶಿವರಾಮ ಶೆಟ್ಟಿ, ಸಾ: ಬಸವನ ಬಾಗೇವಾಡಿ, ಪಿಸ್ತೂಲ್: 01, ಸಜೀವ ಗುಂಡು: 04 ಬಸವನ ಬಾಗೇವಾಡಿ ಠಾಣೆ.
7) ಚನ್ನಪ್ಪಾ ಮಲ್ಲಪ್ಪ ನಾಗನೂರ, ಸಾ: ನೂಲ್ವಿ ತಾ: ಹುಬ್ಬಳ್ಳಿ ಹಾಲಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ಆದರ್ಶನಗರ ಠಾಣೆ.
8) ಸಂತೋಷ ಕಿಶನ್ ರಾಠೋಡ, ಸಾ: ಲೋಹಗಾಂವ ತಾಂಡಾ, ತಾ: ತಿಕೋಟಾ ಜಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ತಿಕೋಟಾ ಠಾಣೆ.
9) ಜನಾರ್ಧನ ವಸಂತ ಪವಾರ, ಸಾ: ಐತವಾಡೆ, ಜಿಲ್ಲಾ: ಸಾಂಗ್ಲಿ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01 ವಿಜಯಪುರ ಗ್ರಾಮೀಣ ಠಾಣೆ.
10) ಸಾಗರ @ ಸುರೇಶ ರಾಠೋಡ, ಸಾ: ಹಂಚನಾಳ ಎಲ್‌ಟಿ ನಂ: 1 (ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 40/2025 ರಲ್ಲಿ ಈಗಾಗಲೇ ಜಪ್ತ ಪಡಿಸಿಕೊಳ್ಳಲಾಗಿದೆ) ಪಿಸ್ತೂಲ್: 01
ಹೀಗೆ ಒಟ್ಟು ೧೦ ಪಿಸ್ತೂಲ್‌ಗಳು ಹಾಗೂ ೨೪ ಸಜೀವ ಗುಂಡುಗಳು ವಶಪಡಿಸಿಕೊಳ್ಳಲಾಗಿದೆ.

ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನ

ಈ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ, ಕರ್ತವ್ಯ ನಿರ್ವಹಿಸಿದ ಡಿಎಸ್‌ಪಿ ರವರಾದ ಗಿರಿಮಲ್ಲ ತಳಕಟ್ಟಿ, ಬಸವರಾಜ ಯಲಿಗಾರ, ಜಗದೀಶ ಎಚ್. ಎಸ್. ಬಲ್ಲಪ್ಪ ನಂದಗಾವಿ, ಪಿಐ/ಸಿಪಿಐ ರವರಾದ ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ, ನಾನಾಗೌಡ ಪಾಟೀಲ, ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ ಹಾಗೂ ಪಿಎಸ್‌ಐ ಗಳಾದ ವಿನೋದ ದೊಡಮನಿ, ಎನ್.ಎ.ಉಪ್ಪಾರ, ಶ್ರೀಕಾಂತ ಕಾಂಬಳೆ, ಆರೀಫ್ ಮುಶಾಪುರಿ, ದೇವರಾಜ ಉಳ್ಳಾಗಡ್ಡಿ, ಸೀತಾರಾಮ ಲಮಾಣಿ, ಬಿ.ಎಮ್. ಸಂಗಾಪುರ, ಎಮ್ ಡಿ ಘೋರಿ, ಬಿ.ಎ.ತಿಪ್ಪರೆಡ್ಡಿ ಹಾಗೂ ಸಿಬ್ಬಂದಿಗಳಾದ ಎಮ್ ಎನ್ ಮುಜಾವರ, ಬಿ ವಿ ಪವಾರ, ಎಚ್ ಡಿ ಗೊಳಸಂಗಿ, ಎಲ್ ಎಸ್ ಹಿರೇಗೌಡರ, ಎ.ಎ.ಪಟ್ಟಣಶೆಟ್ಟಿ, ಆಯ್.ವಾಯ್.ದಳವಾಯಿ, ಎ.ಎಸ್.ಬಿರಾದಾರ, ಆರ್.ಪಿ.ಗಡೆದ, ಎಸ್.ಎಚ್.ನಾಯಕ, ಎಸ್.ಬಿ.ರಾಠೋಡ, ಕೆ.ಎಸ್.ಬಿರಾದಾರ, ಎಸ್.ಪಿ.ಲಮಾಣಿ ರವರ ಕರ್ತವ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದರು.

BIJAPUR NEWS public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ

ಇಂಡಿ ಬಸ್ ಘಟಕಕ್ಕೆ ಅಧ್ಯಕ್ಷ ಅರುಣಕುಮಾರ ಭೇಟಿ

ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳಲು ಮನವಿ

ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ
    In (ರಾಜ್ಯ ) ಜಿಲ್ಲೆ
  • ಇಂಡಿ ಬಸ್ ಘಟಕಕ್ಕೆ ಅಧ್ಯಕ್ಷ ಅರುಣಕುಮಾರ ಭೇಟಿ
    In (ರಾಜ್ಯ ) ಜಿಲ್ಲೆ
  • ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳಲು ಮನವಿ
    In (ರಾಜ್ಯ ) ಜಿಲ್ಲೆ
  • ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬನ್ನಿ ಬಸವನ ನಾಡಿಗೆ, ಸೂಫಿ ಸಂತರ ಬೀಡಿಗೆ
    In (ರಾಜ್ಯ ) ಜಿಲ್ಲೆ
  • ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ
    In (ರಾಜ್ಯ ) ಜಿಲ್ಲೆ
  • ಸೆ.೧೦ ರಿಂದ ವಿಜಯಪುರದಲ್ಲಿ ಭಾರತೀಯ ಸೇನಾ ನೇಮಕಾತಿ ಬೃಹತ್ ರ‍್ಯಾಲಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 08, 2026
    In ದಿನಪತ್ರಿಕೆ
  • ಡಾ.ಜಯಶ್ರೀ ಪಟ್ಟಣ ಅವರಿಗೆ ಆನಂದ ಕಂದ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಶರಣರ ವಚನಗಳು ಬದುಕಿಗೆ ಬೆಳಕು ನೀಡುವ ಸಾಧನ :ಶಾರದಾ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.