ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾಶಿವರಾತ್ರಿ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಕಲ್ಪಿಸಲು ಫೆ.೧೯ ರಿಂದ ಫೆ.೨೬ರ ವರೆಗೆ ಶ್ರೀಶೈಲಗೆ ವಿಶೇಷ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ ಹಾಗೂ ಬಸವನ ಬಾಗೇವಾಡಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವದು. ಸದರಿ ಹೆಚ್ಚುವರಿ ವಾಹನಗಳಿಗೆ ಮುಂಗಡ ಟಿಕೇಟ್ ಬುಕ್ಕಿಂಗ ಸೌಕರ್ಯವನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯಪುರ೧ನೇ ಘಟಕದ ವ್ಯವಸ್ಥಾಪಕ ಮೊಬೈಲ್ ಸಂಖ್ಯೆ: ೭೭೬೦೯೯೨೨೬೩, ವಿಜಯಪುರ-೨ನೇ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: ೭೭೬೦೯೯೨೨೬೪, ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ:೭೭೬೦೯೯೨೨೫೮, ನಗರ ಸಾರಿಗೆ -೩ನೇ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: ೭೭೬೦೯೧೪೦೦೮, ಇಂಡಿ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ:೭೭೬೦೯೯೨೨೬೫, ಸಿಂದಗಿಯ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: ೭೭೬೦೯೯೨೨೬೭ ಹಾಗೂ ಬ.ಬಾಗೇವಾಡಿ ಘಟಕದ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ:೭೭೬೦೯೯೨೨೬೯ ಅಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
