ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆ.ಪಿ.ಟಿ.ಸಿ.ಎಲ್ ವತಿಯಿಂದ ೧೧೦ ಕೆ.ವ್ಹಿ ಬೇ ಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ೧೧೦/೧೧ ಕೆ.ವ್ಹಿ ವಿವಿ ಕೇಂದ್ರ ಕೆಐಎಡಿಬಿ, ಭೂತನಾಳ, ಜುಮನಾಳ, ವಿಜಯಪುರ ಸಿಟಿ ಮತ್ತು ೩೩/೧೧ ಹೊನ್ನುಟಗಿ, ನಾಗಠಾಣ ಹಾಗೂ ೨೨೦/೧೧೦ ಸ್ವೀಕರಣಾ ಕೇಂದ್ರ ವಿಜಯಪುರದಿಂದ ಹೊರಹೋಗುವ ಎಲ್ಲಾ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ ೧೮-೦೨-೨೦೨೫ರ ಬೆಳಿಗ್ಗೆ ೦೯ರಿಂದ ಮಧ್ಯಾಹ್ನ ೨ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೊರಿದ್ದಾರೆ.
