ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಕ್ಫ್ ಆಸ್ತಿ ರಿ.ಸ.ನಂ.೧೦೨೯ರ ೫ಎ ೧೯ಗುಂಟೆ ಜಮೀನಿನಲ್ಲಿ ಅನಧಿಕೃತವಾಗಿ ಶೆಡ್ಡ್ಗಳನ್ನು ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಖಬರಸ್ಥಾನ (ಸ್ಮಶಾನ) ಜಮೀನು ಖಬರಸ್ಥಾನಗೆ ಉಪಯೋಗವಾಗುವ ಹಾಗೆ ಮಾಡಬೇಕು ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಿಂದಗಿ ಪಟ್ಟಣದ ವಕ್ಫ್ ಆಸ್ತಿ ರಿ.ಸ.ನಂ.೧೦೨೯ ಜಮೀನಿನಲ್ಲಿ ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಕ್ಫ ಆಸ್ತಿಯಲ್ಲಿ ಅನಧಿಕೃತ ಶೆಡ್‌ಗಳು ನಿರ್ಮಾಣ ಮಾಡಬಾರದು. ಖಬರಸ್ಥಾನ ಆಸ್ತಿಯಾಗಿಯೇ ಉಳಿಯಬೇಕು. ಒಂದು ವೇಳೆ ಅನಿಧಿಕೃತ ಶೆಡ್ ನಿರ್ಮಿಸಿದರೆ ಮುಂಬರುವ ದಿನಮಾನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಅಂಜುಮನ್ ಸಮಿತಿ ಅಧ್ಯಕ್ಷ ಅಬ್ದುಲ್‌ರಜಾಕ ದುದನಿ, ಸಮಾಜದ ಮುಖಂಡರಾದ ಯಾಕೂಬ್ ನಾಟೀಕಾರ, ಎಂ.ಎ.ಖತೀಬ, ಮೈಬೂಬಸಾಬ ನಾಟೀಕಾರ, ಮೈಬೂಬ ಹಸರಗುಂಡಗಿ, ಮೈಬೂಬ ವಾಲೀಕಾರ, ಸಲೀಮ ಜುಮನಾಳ, ರಹಿಮ್ ದುದನಿ, ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಮೈಬೂಬ ಸಿಂದಗಿಕರ ಸೇರಿದಂತೆ ಅನೇಕರಿದ್ದರು.

