ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಮೇಷನ್ ಕಿಟ್ಗಳನ್ನು ವಿತರಿಸಲಾಗುತ್ತಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಫೆಬ್ರವರಿ ೨೧ರೊಳಗೆ ಅರ್ಜಿಯನ್ನು ಕಾರ್ಮಿಕ ನಿರೀಕ್ಷಕರ ಕಚೇರಿ ೧ನೇ ವೃತ್ತ ಮತ್ತು ಕಾರ್ಮಿಕ ನಿರೀಕ್ಷಕರ ಕಚೇರಿ ೨ನೇ ವೃತ್ತ, ವಿಜಯಪುರ ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ, ಅಲ್ಲಾಪೂರ ಓಣಿ, ವಿಜಯಪುರ ಕಚೇರಿಗೆ ಸಲ್ಲಿಸುವಂತೆ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
