ಮುದ್ದೇಬಿಹಾಳ: ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿರುವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಯಾಗಬೇಕು ಎಂದು ಪ್ರಾರ್ಥಿಸಿ ತಾಲೂಕಿನ ಸಿದ್ದಾಪೂರ ಗ್ರಾಮದ ಯುವಕರಾದ ಸೋಮನಾಥ ಮಾದರ ಮತ್ತು ಮಲ್ಲು ಮಾದರ ಗ್ರಾಮದ ಮುಖ್ಯ ದ್ವಾರದಿಂದ ಬೂತಾಳ ಸಿದ್ದೇಶ್ವರ ದೇವಸ್ಥಾನದವರೆಗೆ ಮಡಿಯಿಂದ ದೀರ್ಘದಂಡ ನಮಸ್ಕಾರ ಹಾಕಿ ಪ್ರಾರ್ಥಿಸಿದರು.
ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಮತಕ್ಷೇತ್ರ ಸರ್ವಾಧಿಕಾರಿಗಳ ಹಿಡಿತದಲ್ಲಿದೆ. ಇದರಿಂದ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಇವರ ಕೈಯಲ್ಲಿ ಆಡಳಿತ ಸಿಕ್ಕರೆ ಯಾರನ್ನೂ ನೆಮ್ಮದಿಯಿಂದ ಜೀವನ ನಡೆಸಲು ಇವರು ಬಿಡುವದಿಲ್ಲ. ಇವರ ವಿರುದ್ಧ ಹೋರಾಡುವ ಶಕ್ತಿ ನಮ್ಮಲ್ಲಿ ಇಲ್ಲ. ಬಡವರಾದ ನಮಗೆ ಬೂತಾಳ ಸಿದ್ದೆಶ್ವರ ದೇವರ ಮೇಲೆ ಅಪಾರ ನಂಬಿಕೆ ಇದೆ. ಈ ಅಟ್ಟಹಾಸವನ್ನು ಕೊನೆ ಮಾಡಲು ಅವರಿಂದ ಮಾತ್ರ ಸಾಧ್ಯ. ಹಾಗಾಗಿ ನಾವು ಅವರಲ್ಲಿಯೇ ಮೊರೆ ಹೋಗಿ ಶಾಂತಿ, ಸಮಾಧಾನದ ಆಡಳಿತಕ್ಕೆ ಹೆಸರುವಾಸಿಯಾಗಿರುವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರನ್ನು ಮತಕ್ಷೇತ್ರದ ಎಲ್ಲ ಜನತೆ ಪ್ರಚಂಡ ಬಹುಮತದಿಂದ ಆರಿಸಿ ತರಲಿ ಎಂದು ಧೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದರು.
Subscribe to Updates
Get the latest creative news from FooBar about art, design and business.
ಸಿ.ಎಸ್.ನಾಡಗೌಡ ಗೆಲುವಿಗೆ ಪ್ರಾರ್ಥಿಸಿ ಸಿದ್ದಾಪೂರ ಯುವಕರಿಂದ ದೀರ್ಘದಂಡ ನಮಸ್ಕಾರ
Related Posts
Add A Comment