ಇಂಡಿ : ರಸ್ತೆ, ಶಿಕ್ಷಣ ಗುಣಮಟ್ಟದ ಸುಸಜ್ಜಿತ ಆಸ್ಪತ್ರೆ ಹಾಗೂ ಮೂಲಭೂತ ಸೌಕರ್ಯದಿಂದ ಇಂಡಿ ಮತಕ್ಷೇತ್ರ ವಂಚಿತವಾಗಿದೆ ಎಂದು ಮಾಜಿ ಶಾಸಕ ರವಿಕಾಂತ್ ಪಾಟೀಲ ದೂರಿದರು.
ತಾಲ್ಲೂಕಿನ ಅಗರಖೇಡ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತಾನಾಡಿದರು.
ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಭೀಮಾತೀರ ಸಂಪೂರ್ಣವಾಗಿ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಡಿ ಪಾಟೀಲ ಮಾತಾನಾಡಿ, ಭೀಮಾ ತೀರದ ಬಹುತೇಕ ಗ್ರಾಮಗಳಲ್ಲಿ ಪ್ರವಾಹದ ಕಾಲದಲ್ಲಿ ಹಲವಾರು ಸಮಸ್ಯೆಗಳು ಇದ್ದು, ನಾನು ಕಣ್ಣಾರೆ ಕಂಡಿದ್ದೇನೆ. ಅಂತಹ ಸಮಸ್ಯೆಗಳು ಪದೆ ಪದೆ ಉದ್ಬವಾಗದಂತಿರಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ನಿಮ್ಮ ಮತ ನೀಡಬೇಕು. ಖಚಿತವಾಗಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಮುಖಂಡರಾದ ನೀಲಕಂಠ ಸಾವಳಗಿ, ನಾಗೇಶ ತಳಕೇರಿ, ಶ್ರೀಶೈಲಗೌಡ ಪಾಟೀಲ, ಅಯೂಬ್ ನಾಟೀಕರ, ಡಾ ರಮೇಶ ರಾಠೋಡ ಮಾತನಾಡಿದರು.
ವೇದಿಕೆ ಮೇಲೆ ಶಿವಾನಂದಗೌಡ ಪಾಟೀಲ, ಸದ್ದಾಂ ಅರಬ್, ಶಿವುಕುಮಾರ ಅಂದೇವಾಡಿ, ಸಿದ್ದು ಡಂಗಾ, ಕಾಶಿನಾಥ್ ಮಾನೆ, ರವಿ ಕ್ಷೇತ್ರಿ, ಕಾಮಾ ಕ್ಷೇತ್ರಿ, ನಂದಾ ಗುನ್ನಾಪೂರ, ಸುರೇಶ ಡಿ ಕೆ ,ಶಿವಾಜಿ ರಾಠೋಡ, ತುಕಾರಾಂ ತಾಂಬೆ, ಅಶೋಕ ಖಂಡೇಕರ, ಸುದರ್ಶನ್ ಕ್ಷೇತ್ರಿ, ನಿಯಾಝ್ ಅಗರಖೇಡ ರಾಜು ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.