ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣ ಎಂದರೆ ಅಂದು ಕಠಿಣವಿತ್ತು. ಆದರೆ ಇಂದು ಎಲ್ಲವೂ ಇದೇ. ಕಲಿಯುವ ಮತ್ತು ಕಲಿಸುವವರ ಸಂಖ್ಯೆ ಬಹಳ ಕಡಿಮೆಯಾಗಿದೆ ಎಂದು ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಮ್.ಪಾಟೀಲ ಗಣಿಹಾರ ಹೇಳಿದರು.
ಸಿಂದಗಿ ಪಟ್ಟಣದ ಅಲಮೇಲ ರಸ್ತೆಯ ಹೊರವಲಯದಲ್ಲಿರುವ ಪಿಇಎಸ್ ಕಾಲೇಜಿನ ಸಭಾಂಗಭದಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆ, ಲಾಯನ್ಸ್ ಕ್ಲಬ್ ಹಾಗೂ ಸಿಂದಗಿ ಮಾತೋಶ್ರಿ ಗುರುಬಸಮ್ಮ ಹಣಮಂತ್ರಾಯ ಸೋಮಾಪೂರ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೆ.ಎಚ್.ಸೋಮಾಪೂರ ಅವರ “ಬಾಳ ಬುತ್ತಿ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮೌಲ್ಯಾಧಾರಿತ ಶಿಕ್ಷಣ ಹಾಗೂ ಮಾನವೀಯತೆ ಕೊರತೆ ಇದೆ. ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಬಿಡುತಿದ್ದೇವೆ. ಇಂದಿನ ಮಕ್ಕಳಲ್ಲಿ ಮಾನವೀಯತೆ, ಮೌಲ್ಯ, ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ವಿದ್ಯಾರ್ಥಿಗಳು ಅತೀ ಹೆಚ್ಚು ಮೊಬೈಲ್ ಬಳಕೆಮಾಡಬಾರದು. ಮಕ್ಕಳನ್ನು ಇಂದು ಎಟಿಎಂ ಆಗಿ ತಯಾರಮಾಡುತ್ತಿದ್ದೇವೆ. ಮೊಬೈಲ್ ಗಿಳಿನಿಂದ ಎಲ್ಲರೂ ಹೊರಗೆ ಬರಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕಾರ್ಯುಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ನಮ್ಮ ಜೀವನದ ಸಂಗಾತಿ ಇದ್ದಂತೆ. ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ನಮ್ಮಲ್ಲಿ ಆಲೋಚನಾ ಶಕ್ತಿ ಹೆಚ್ಚಿಸುತ್ತದೆ. ಪ್ರತಿಯೊಂದು ವಿಚಾರದಲ್ಲೂ ಆಳವಾದ ಅಧ್ಯಯನ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಮ್.ಪಾಟೀಲ, ಸಮ್ಮುಖವನ್ನು ವಹಿಸಿದ್ದ ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಮಹಾದೇವ ಲೋಣಿ ವಹಿಸಿದ್ದರು. ಸಾಹಿತಿ ಸಿ.ಎಂ.ಬಂಡಗಾರ ಕೃತಿ ಪರಿಚಯವನ್ನು ಪರಿಚಯಿಸಿದರು. ಈ ವೇಳೆ ಅಂಜುಮನ್ ಐಟಿಐ ಕಾಲೇಜಿನ ಪ್ರಾಚಾರ್ಯ ಝಡ್.ಆಯ್.ಅಂಗಡಿ, ಲಾಯನ್ಸ್ ಕ್ಲಬ್ ಕಾರ್ಯದರ್ಶಿ ಆಯ್.ಬಿ.ಬಿರಾದಾರ, ಪ್ರಾಚಾರ್ಯ ಆರ್.ಬಿ.ಗೋಡಕರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಬಾಳ ಬುತ್ತಿ ಕೃತಿಯನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಗುರು ಕಡಣಿ ಕಾರ್ಯಕ್ರಮ ನಿರ್ವಹಿಸಿದರು.

