ವಿಜಯಪುರ: ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಕಡಿಮೆ ಇದ್ದರೂ ವಿಶೇಷವಾಗಿ ಟಾರ್ಗೆಟ್ ಮಾಡಿ ಎಐಎಂಐಎA ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಮೌಲಾನಾ ಒಬ್ಬರು ಇದರ ಹಿಂದೆ ಇದ್ದಾರೆ, ನಮ್ಮ ಪಕ್ಷದವರೂ ಅವರ ಹಿಂದೆ ಇದ್ದಾರೆ ಎಂದು ಭಾಸವಾಗುತ್ತದೆ. ಚುನಾವಣೆ ನಂತರ ಎಲ್ಲವನ್ನೂ ಬಹಿರಂಗಪಡಿಸುವೆ ಎಂದು ಬಸವನ ಬಾಗೇವಾಡಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಬಾಹುಳ್ಯ ಮತದಾರರಿರುವ ಕ್ಷೇತ್ರದಲ್ಲಿಯೇ ಎಐಎಂಐಎಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ಆದರೆ ಬಸವನ ಬಾಗೇವಾಡಿಯನ್ನು ವಿಶೇಷ ಟಾರ್ಗೆಟ್ ಮಾಡಿ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ನಮ್ಮವರೇ ಕೆಲವೊಬ್ಬರು ಇವರ ಹಿಂದೆ ಇದ್ದಾರೆ, ಚುನಾವಣೆ ನಂತರ ಎಲ್ಲವನ್ನೂ ಬಹಿರಂಗಪಡಿಸುವೆ ಎಂದರು.
ನನ್ನನ್ನು ಸೋಲಿಸಬೇಕೆಂದು ನನ್ನ ವಿರುದ್ಧ ವ್ಯವಸ್ಥಿತ ಹುನ್ನಾರ ನಡೆದಿದೆ. ಕುತಂತ್ರ ರಾಜಕಾರಣ ಏನೇ ನಡೆದರೂ ಜನತೆ ನನ್ನ ಕೈ ಬಿಡೊಲ್ಲ ಎಂಬ ವಿಶ್ವಾಸ ನನಗಿದೆ. ಈ ರೀತಿಯ ರಾಜಕಾರಣ ಕೊನೆಯಾಗಬೇಕು. ಇಡೀ ಜಿಲ್ಲೆಯಲ್ಲಿ ನನ್ನ ಅಭಿಮಾನಿಗಳಿದ್ದಾರೆ, ನಂತರ ಅವರು ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೌಲಾನಾ ಒಬ್ಬರು ತಮ್ಮ ಸಮುದಾಯಕ್ಕೆ ತಮ್ಮ ಮತವನ್ನು ಎಐಎಂಎಐಎA ಹಾಕಿ, ಇಲ್ಲವಾದರೆ ಜನತಾದಳಕ್ಕೆ ಹಾಕಿ ಎನ್ನುತ್ತಿದ್ದಾರೆ. ಹೀಗಾದರೆ ನೇರವಾಗಿ ಬಿಜೆಪಿಗೇ ಮತ ಹಾಕಿಬಿಡಿ ಎಂದು ಖಾರವಾಗಿ ನುಡಿದರು.
ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ೧೦ ಮುಸ್ಲಿಂ ಮತಗಳೂ ಸಹ ಹೋಗುವುದಿಲ್ಲ. ಜನತೆ ನನಗೆ ಕೈ ಬಿಡುವುದಿಲ್ಲ, ಇನ್ನೂ ೧೦ ಜನ ನನ್ನೆದುರು ನಿಂತರೂ ಸಹ ನಾನು ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಎಂದಿಗೂ ಕೆಲವು ವಿಚಾರಗಳನ್ನು ಹೇಳಿಲ್ಲ, ಇಷ್ಟು ದಿನ ಎಲ್ಲವನ್ನೂ ಸಾಕಷ್ಟು ಸಹಿಸಿಕೊಂಡಿರುವೆ, ನನ್ನ ಸಹನೆ ಬಲಹೀನತೆ ಅಲ್ಲ, ಇದೇ ರೀತಿ ಮುಂದುವರೆದರೆ ನನ್ನ ರಾಜಕಾರಣ ಸಹ ದೊಡ್ಡದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ನನ್ನ ವಿರೋಧಿಗಳಿಗೆ ದೇವರು ಸದ್ಭುದ್ಧಿ ನೀಡಲಿ ಎಂದರು.
ವಿಜಯಪುರದಲ್ಲಿ ಕರೆಯದಿದ್ದರೂ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ನನ್ನನ್ನು ನಗರದಲ್ಲಿ ತಮ್ಮ ಪರವಾಗಿ ಪ್ರಚಾರಕ್ಕೆ ಕರೆದಿಲ್ಲ. ಆದರೆ ಸ್ವಯಂ ಪ್ರೇರಿತವಾಗಿ ನಾನೇ ಪ್ರಚಾರ ಮಾಡುತ್ತಿದ್ದೇನೆ. ಅವರು ಹೇಳಿದರೂ, ಹೇಳದಿದ್ದರೂ ಸಹ ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದರು.
ಇನ್ನು ಈಗಷ್ಟೇ ಜೆಡಿಎಸ್‌ಗೆ ಪುನ: ಸೇರ್ಪಡೆಯಾಗಿರುವ ಅಭ್ಯರ್ಥಿ ಗಣವೇಷದಲ್ಲಿ ಪಥಸಂಚಲನ ನಡೆಸಿದ್ದಾರೆ. ನಮ್ಮ ಪಕ್ಷದ ಕೆಲವರೇ ಇವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದು ಶಿವಾನಂದ ಪಾಟೀಲ ಆರೋಪಿಸಿದರು.
ಸ್ವಸಂತೋಷದಿಂದ ಪಕ್ಷಕ್ಕೆ ಬಂದಿದ್ದೇವೆ
ಎಐಎ0ಎಐಎ0 ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವ-ಸಂತೋಷದಿAದ ಸೇರ್ಪಡೆಯಾಗಿದ್ದು, ಬಸವನ ಬಾಗೇವಾಡಿ ಶಾಸಕರ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಐಎಂಐಎA ಆಯ್ಕೆಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವ ತೌಸೀಫ್ ಗಿರಗಾಂವಿ, ಕಂಕನಪೀರ ಅವರು ಸ್ಪಷ್ಟಪಡಿಸಿದರು.