ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯಾದಗಿರಿ ಜಿಲ್ಲೆಯ ತಿಂಥಣಿಯ ಮೌನೇಶ್ವರಿ ಜಾತ್ರೆ ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಮುದ್ದೇಬಿಹಾಳ ಹಾಗೂ ತಾಳಿಕೋಟ ಬಸ್ ನಿಲ್ದಾಣದಿಂದ ಫೆ.೯ ರಿಂದ ಫೆ.೧೫ರ ವರೆಗೆ ವಿಶೇಷ ಸಾರಿಗೆಯನ್ನು ಕಾರ್ಯಾಚರಣೆ ಮಾಡಲಿದ್ದು, ಜಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕ ಮೊ.ನಂ ೭೭೬೦೯೯೨೨೬೭ ಹಾಗೂ ತಾಳಿಕೋಟ ಘಟಕ ವ್ಯವಸ್ಥಾಪಕ ಮೊ.ನಂ ೭೭೬೦೯೯೨೨೬೮ ಗೆ ಸಂಪರ್ಕಿಸಬಹುದು ಎಂದು ಕ.ಕ.ರ.ಸಾ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯು ತಿಳಿಸಿದೆ.
