ಉದಯರಶ್ಮಿ ದಿನಪತ್ರಿಕೆ
ಚಡಚಣ: ಭಾರತ ಹುಣ್ಣಿಮೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸುಕ್ಷೇತ್ರ ನಿವರಗಿ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ನಿಮಿತ್ಯ ಶ್ರೀ ಮಹಾಲಕ್ಷ್ಮೀದೇವಿ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ .
ದಿನಾಂಕ : 11-02-2025 ರಂದು ಮಂಗಳವಾರ ನಸುಕಿನ ಜಾವ 5-00 ಗಂಟೆಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುವುದು, ರಾತ್ರಿ 8-00 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗುವುದು ಹಾಗೂ ಶ್ರೀ ಘೋಳೆಶ್ವರರಿಂದ ನುಡಿಮುತ್ತುಗಳು ಜರುಗುವವು,
ದಿನಾಂಕ : 12-02-2025 ರಂದು ಬುಧವಾರ ಮುಂಜಾನೆ 08.00 ಗಂಟೆಗೆ ರಂಗೋಲಿ ಸ್ಪರ್ಧೆ ಇದ್ದು ವೀಜೆತರಿಗೆ ಬಹುಮಾನ ಇರುವುದು. ಮುಂಜಾನೆ 11 ಗಂಟೆಗೆ ಜಾನುವಾರಗಳ ಜಾತ್ರಾಮೇಳ ಜರುಗುವುದು ಇದೇ ದಿವಸ ಮಧ್ಯಾಹ್ನ 3-30 ಗಂಟೆಗೆ ಟಗರಿನ ಕಾಳಗ ಇರುತ್ತದೆ.
ಅದೇ ದಿನ ರಾತ್ರಿ 9.30 ಗಂಟೆಗೆ ಅಣ್ಣ ಅಧಿಕಾರಿ ತಂಗಿ ಭಿಕಾರಿ ಎಂಬ ನಾಟಕ ಜರುಗುವುದು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕಮೀಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

