ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಜೀವನದಲ್ಲಿ ಹತ್ತನೇ ತರಗತಿ ಫಲಿತಾಂಶ ಅತಿ ಅಮೂಲ್ಯವಾದದ್ದು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.
ನಗರದ ಟಕ್ಕೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆ ಸಲುವಾಗಿ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜುಮನಾಳ ಸರ್ಕಾರಿ ಪ್ರೌಢ ಶಾಲೆಯ ಪೃಥ್ವಿ ಬಿರಾದಾರ ಮಗುವಿನ ಮೊದಲ ಫೋನ್ ಕರೆ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ಈ ಪರೀಕ್ಷೆ ನಿಮ್ಮ ಜೀವನದಲ್ಲಿ ಅತಿ ಅಮೂಲ್ಯವಾದದ್ದು, ನೀವು ಚೆನ್ನಾಗಿ ಅಧ್ಯಯನ ಮಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆಗೆ ಸಿದ್ಧರಾಗಿ ನೀವು ಚೆನ್ನಾಗಿ ಅಧ್ಯಯನ ಮಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆಗೆ ಸಿದ್ಧರಾಗಿ ಪರೀಕ್ಷೆಯಲ್ಲಿ ಜಲ ಜಯಶಾಲಿಗಳಾಗಿ ಬನ್ನಿ ಎಂದು ಹಾರೈಸಿದರು.
ಆರಂಭ ದಿನವಾದ ಇಂದು ಒಟ್ಟು 142 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕನ್ನಡದ ವಿಷಯದಲ್ಲಿ ಬರುವಂತಹ ಹಳೆಗನ್ನಡ ಹೊಸಗನ್ನಡ ವ್ಯಾಕರಣ ಅಂಶಗಳನ್ನು ನೆನಪಿನ ಬಗ್ಗೆ ಅನ್ನ ವಿವರಿಸಿದರು. ಅದೇ ರೀತಿ ಗಣಿತ ವಿಷಯದಲ್ಲಿ ಕೂಡ ಸೂತ್ರಗಳು ಪ್ರಮೇಯಗಳ ಬಗ್ಗೆ ತಿಳಿದುಕೊಂಡರು. ಮಕ್ಕಳು ತಮ್ಮ ಸಮಸ್ಯೆಗಳಿಗೆ ಸಂಪನ್ಮೂಲ ಶಿಕ್ಷಕರಿಂದ ಉತ್ತರವನ್ನು ಕಂಡು ಹರ್ಷಗೊಂಡರು.
ಈ ಕಾರ್ಯಕ್ರಮದ ಸದ್ಬಳಕೆಯನ್ನು ಗ್ರಾಮೀಣ ವಲಯದ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಪ್ರೌಢಶಾಲೆಯ ಮಕ್ಕಳು ಪಡೆದುಕೊಳ್ಳಬೇಕು. ಶಾಲೆಯ ಶಿಕ್ಷಕರು ಮಕ್ಕಳು ಕೇಳುವ ಪ್ರಶ್ನೆ ಕೇಳಿ ಸಮಸ್ಯೆ ಪರಿಹಾರ ಮಾಡಿಕೊಡಲು ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಳೋಲಮಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಸಂತ ಚವ್ಹಾಣ, ಪ್ರಭು ಬಿರಾದಾರ, ಹಣಮಂತ ಕುಡಚಿ, ಸುರೇಶ ದೇವೂರು, ಶಿವಶರಣ ಶಿರೂರು, ಮಾಂತೇಶ ಅಂಗಡಿ, ಮಂದಾಕಿನಿ ಎಂ, ಲತಾ ಶಿಪುರ, ಲತಾ ಜೋಷಿ, ಪ್ರಕಾಶ ಬಿರಾದಾರ ಶ್ರೀ ಪಾಪಯ್ಯ, ಬಿ. ಎಸ್.ಬೆಳ್ಳುಡಗಿ ಹಾಜರಿದ್ದರು.