ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಕಕರಸಾ ನಿಗಮ ವಿಜಯಪುರ ವಿಭಾಗದಿಂದ ಕರಾರು ಒಪ್ಪಂದದ ಮೇರೆಗೆ ನಾನ್ ಎಸಿ ಸ್ಲೀಪರ ಹಾಗೂ ವೇಗದೂತ ಬಸ್ಸುಗಳನ್ನು ಬಿಡಲಾಗುವುದು. ಪ್ರಯಾಣಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ವಿನಂತಿಸಲಾಗಿದೆ.
ಪ್ರಯಾಣಿಕರು ಕೆಳಗೆ ನಮೂದಿಸಿದ ಕರಾರು ಒಪ್ಪಂದದ ಸಾರಿಗೆ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ವಿಜಯಪುರ ೧ನೇ ಘಟಕದ ವ್ಯವಸ್ಥಾಪಕರ ಮೊ.ಸಂ ೭೭೬೦೯೯೨೨೬೩, ೨ನೇ ಘಟಕದ ೭೭೬೦೯೯೨೨೬೪, ಇಂಡಿ- ೭೭೬೦೯೯೨೨೬೫, ಸಿಂದಗಿ- ೭೭೬೦೯೯೨೨೬೬, ಮುದ್ದೇಬಿಹಾಳ- ೭೭೬೦೯೯೨೨೬೭, ತಾಳಿಕೋಟ- ೭೭೬೦೯೯೨೨೬೮, ಬ.ಬಾಗೇವಾಡಿ- ೭೭೬೦೯೯೨೨೬೯, ವಿಜಯಪುರ ಕೇಂದ್ರ ಬಸ್ ನಿಲ್ದಾಣಾಧಿಕಾರಿ ಮೋ ಸಂ -೭೭೬೦೯೯೨೨೫೮ ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಮೊ.ಸಂ-೭೭೬೦೯೯೨೨೫೨ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.