ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯಾದ್ಯಂತ ಮೈಕ್ರೋ ಪೈನಾನ್ಸ್ಗಳು ನೀಡುತ್ತಿರುವ ಕಿರುಕುಳ ಕುರಿತು ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊಂದು ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಮಾಡಬಾಳ ಗ್ರಾಮದ ನಿಂಬೆವ್ವ ದ್ಯಾವಪ್ಪ ದಿವಟಗಿ ಒಂದು ವರ್ಷದಿಂದ ಮೈಕ್ರೋ ಪೈನಾನ್ಸ್ಗಳಲ್ಲಿ ವ್ಯಯಕ್ತಿಕವಾಗಿ ಹಾಗೂ ಸಂಬಂಧಿಕರ ಹೆಸರಿನ ಮೇಲೆ ಸಾಲ ಪಡೆದಿರುವುದಾಗಿ ಖಚಿತ ಪಡಿಸಿದ್ದಾರೆ. ಆದರೆ ಸಾಲದ ಕಂತು ತುಂಬಲು ಹಾಗೂ ಸಾಲ ಮುಟ್ಟಿಸಲು ಇನ್ನೂ ಸ್ವಲ್ಪ ಸಮಯವಕಾಶ ನೀಡಿ ಎಂದು ಮೈಕ್ರೋ ಪೈನಾನ್ಸಿನ ಸಿಬ್ಬಂದಿಗಳಿಗೆ ಹಲವು ಬಾರಿ ಕೇಳಿಕೊಂಡಿದ್ದೇನೆ. ಆದರೆ ತಮ್ಮ ಮನಸ್ಸಿಗೆ ಬಂದಂತೆ ರಾತ್ರಿ ಹಗಲೆನ್ನದೇ ಅವಾಚ್ಯ ಶಬ್ದಗಳಿಂದ ಮಾನಸಿಕ ಕಿರುಕುಳ ನೀಡುತ್ತಿರುವುದು ಮಾತ್ರ ನಿಲ್ಲಿಸಿಲ್ಲ ಎಂದು ಆರೋಪಿಸಿ ೫ ಮೈಕ್ರೋ ಪೈನಾನ್ಸ್ಗಳ ಮೇಲೆ ಜ.೨೪ರಂದು ದೂರು ದಾಖಲಿಸಿದ್ದಾರೆ. ಆದರೆ ಪ್ರಕರಣ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ.
ಸಿಂದಗಿ ಶಾಖೆಗಳಾದ ಬಿ.ಎಸ್.ಎಸ್.ಮೈಕ್ರೋ ಪೈನಾನ್ಸ್, ನವಚೇತನ(ಈ.ಎಸ್.ಎ.ಎಪ್), ಪ್ರಗತಿ ಪೈನಾನ್ಸ್, ಭಾರತ ಪೈನಾನ್ಸ್ ಮತ್ತು ಪೈವ್ ಸ್ಟಾರ್ ಹೋಮ ಲೋನ ಬ್ಯಾಂಕಿನ ಮೇಲೆ ದೂರು ದಾಖಲಿಸಿರುವ ಅವರು ಸಿಂದಗಿ ಪೈವ್ ಸ್ಟಾರ್ ಹೋಮ ಲೋನ ಬ್ಯಾಂಕಿನ ಸಿಬ್ಬಂದಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಲ ತಿರಿಸಲು ಸಮಯಾವಕಾಶ ಕೊಡಿಸಿ ಮತ್ತು ನ್ಯಾಯ ದೊರಕಿಸಿ ಕೊಡಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ.
ಈ ಪ್ರಕರಣ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.