ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿಯ ಚಿಮ್ಮಲಗಿ ಭಾಗ ೧ ಎ ಗ್ರಾಮದ ಭಾವಸಾರ ಕ್ಷತ್ರಿಯ ಸಮಾಜದ ಅಂಬಾಭವಾನಿ ದೇವಿಯ ಜಾತ್ರೆ ಫೆ ೨ ಭಾನುವಾರ ಜರುಗಲಿದೆ.
ಆ ದಿನ ಬೆಳಿಗ್ಗೆ ೬ ಕ್ಕೆ ಅಂಬಾಭವಾನಿ ದೇವಿಗೆ ವಿಶೇಷ ಆರತಿ ಪೂಜೆ ಜರುಗಲಿದೆ.
ನಂತರ ಚಂದ್ರಮ್ಮ ದೇವಸ್ಥಾನದ ಕೃಷ್ಣಾ ನದಿಯಿಂದ ಅಂಬಾಭವಾನಿ ದೇವಸ್ಥಾನದವರೆಗೆ ೨೦೧ ಕುಂಭಗಳ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ.
ನಂತರ ದೇವರಿಗೆ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ ೧ ಕ್ಕೆ ಸನ್ಮಾನ ಸಮಾರಂಭ ಜರುಗಲಿದ್ದು, ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ಶ್ರೀ ಸಿದ್ಧರೇಣುಕ ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ವಿಜಯಪುರ ದ ಮಾಜಿ ಉಪಮೇಯರ್ ರಾಜೇಶ ದೇವಗಿರಿ ಆಗಮಿಸಲಿದ್ದಾರೆ. ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ೭ ಕ್ಕೆ ಫಂಡರಪುರದ ಪ್ರಭಾಕರ ಬೋಧಲೆ ಮಹಾರಾಜರ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.