ಕಾಲುವೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ನೀಡಲು ರೈತಸಂಘ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಾಲುವೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ಕೊಟ್ಟ ನಂತರ ಕಾಲುವೆ ನಿರ್ಮಾಣ ಕಾರ್ಯ ಪ್ರಾರಂಬಿಸಬೇಕು ಇಲ್ಲದಿದ್ದರೆ ಪರಿಹಾರ ಕೊಡದೆ ಪ್ರಾರಂಬಿಸಿದರೆ ಸಂಬಂಧಿಸಿದ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೆಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಇಲಾಖೆ ಅಧಿಕಾರಿಗಳಿಗಳಿಗೆ ಎಚ್ಚರಿಕೆ ನೀಡಿದರು.
ಗುರುವಾರದಂದು ರಬಿನಾಳ ಗ್ರಾಮದ ರೈತರು ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಛೇರಿಗೆ ತೆರಳಿ ವಿಶೇಷ ಭೂಸ್ವಾಧೀನಾಧಿಕಾರಿ ಆದ ಶಿವಾನಂದ ಸಾಗರ ಇವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ರಬಿನಾಳ ಗ್ರಾಮ ಮತ್ತು ಇನ್ನುಳಿದ ಹಳ್ಳಿಗಳಲ್ಲಿ ಸ್ವಾಧೀನಪಡಿಸಿಕೊಂಡ ಕಸಂ ನಂ: ೬೧,೨೬೩,೧೩೮/೧,೧೩೮/೫,೧೩೮/೩,೧೩೮/೨,೧೨೪,೨೪೭,೨೫೫/೧ ,೧೬೫/೧ ,೧೩೪/೧,೨೪೬/೧/೨/೩/೪/೫,೧೩೮/೪ ಈ ಜಮೀನುಗಳನ್ನು ಕ್ರಷ್ಣಾ ಮೇಲ್ದಂಡೆ ಯೋಜನೆ ಮೂರನೇಯ ಹಂತದ ಮುಳವಾಡ ಏತ ನೀರಾವರಿ ಯೋಜನೆಯಡಿಯಲ್ಲಿ ಬರುವ ಬಸವನ ಬಾಗೇವಾಡಿ ವಿತರಣಾ ಕಾಲುವೆ ೧೫ ಲ್ಯಾಟರಲ್ ೧ ಹಾಗೂ ೨ ಈ ಕಾಲುವೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿದ್ದು ದಿನಾಂಕ: ೨೦/೦೩/೨೦೨೪ ರಂದು ನೋಟಿಸ್ ಕೊಟ್ಟಿರುತ್ತಾರೆ ಆದರೆ ನೋಟಿಸ್ ಬಂದ ನಂತರ ಇಲ್ಲಿಯವರೆಗೆ ಜಿ.ಎಮ್.ಸಿ ನೋಟಿಸ್ ಕೊಟ್ಟಿರುವದಿಲ್ಲ ಸ್ವಾಧೀನ ಪಡಿಸಿಕೊಂಡ ಜಮೀನುಗಳ ಪರಿಹಾರ ಹಣವಾಗಿ ಪ್ರತಿ ಗುಂಟೆಗೆ ಎಷ್ಟು ಹಣ ಪರಿಹಾರ ಬರುತ್ತದೆ ಮತ್ತು ಒಟ್ಟು ರೈತರಿಗೆ ದೊರೆಯುವ ಹಣ ಇದರ ಬಗ್ಗೆ ಮಾಹಿತಿ ನೀಡಿರುವುದಿಲ್ಲ.
ಕಾಲುವೆಗಾಗಿ ಭೂಮಿಯನ್ನು ಅಗೆಯುವ ಮುಂಚೆ ಎಲ್ಲ ಮಾಹಿತಿಯನ್ನು ತಿಳಿಸಿ ಜಿ.ಎಮ್.ಸಿ ನೋಟಿಸ್ ಜಾರಿಗೊಳಿಸಿ ಕಾಲುವೆ ಕಾಮಗಾರಿಯನ್ನು ಆರಂಬಿಸಬೇಕು ನಿಯಮದ ಪ್ರಕಾರ, ಕ್ರಮ ಕೈಗೊಳ್ಳದೆ ಈಗಾಗಲೆ ಕಾಲುವೆ ಅಗೆಯುವ ಕಾಮಗಾರಿ ಆರಂಬಿಸಲಾಗಿದೆ. ಕೆಲವೊಂದು ರೈತರ ಜಮೀನಿನಲ್ಲಿ ಕಾಲುವೆ ಅಗೆಯುವ ಕಾರ್ಯ ಮುಕ್ತಾಯಗೊಳಿಸಿದ್ದಾರೆ. ರೈತರ ಒಪ್ಪಿಗೆಯಿಲ್ಲದೆ ಪರಿಹಾರ ಕೊಡದೆ ಕಾಮಗಾರಿ ಮುಗಿಸಿರುವುದು ಕಾನೂನು ಬಾಹಿರ ನಿಯಮದ ಪ್ರಕಾರ ಪರಿಹಾರ ಕೊಟ್ಟ ನಂತರ ಕಾಮಗಾರಿ ಪ್ರಾರಂಬಿಸಬೇಕೆಂಬ ನಿಯಮವಿದೆ ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಬಲ ಜೋರಿಯಿಂದ ಕಾಮಗಾರಿ ಪ್ರಾರಂಬಿಸಲಾಗಿದೆ.
ಕಾರಣ ಜಿ.ಎಮ್.ಸಿ ಮಾಡದೆ ಪರಿಹಾರವನ್ನು ನೀಡದೆ ರೈತರಿಗೆ ವಂಚಿಸಿದ್ದಾರೆ ಆದ್ದರಿಂದ ಪರಿಹಾರ ನೀಡದೆ ಕಾಮಗಾರಿಯನ್ನು ಪ್ರಾರಂಬಿಸಬಾರದು ಒಂದು ವೇಳೆ ಕಾಮಗಾರಿ ಪ್ರಾರಂಭಿಸಿದರೆ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೇವಣಸಿದ್ದ ಐಗಳಿ, ಹಣಮಂತ ಮುರಾಳ, ಅರವಿಂದ ಮುರಾಳ, ಶರಣಯ್ಯ ಮಠ, ರುದ್ರಯ್ಯ ಮಠ, ಮಲ್ಲಿಕಾರ್ಜುನ ಲಗಮಣ್ಣ ದೊಡಮನಿ, ಬಸಪ್ಪ ದಳವಾಯಿ, ಶ್ರೀಶೈಲ ಇಬ್ರಾಹಿಂಪೂರ, ನಿಂಗಪ್ಪ ಮಡಿಕೇಶ್ವರ, ದರಮಣ್ಣ ಬೂದಗೋಳಿ, ಬಸಪ್ಪ ದೊಡಮನಿ (ಕುರುಬರ) ಇತರರು ಇದ್ದರು.